ಹನುಮಾನ್​ ದೇಗುಲದಿಂದ ವಾಪಸ್ಸಾಗುತ್ತಿದ್ದ ಮಹಿಳೆ ಮೇಲೆ ಆಸಿಡ್​ ದಾಳಿ!

acid-attack
Published on

ನವದೆಹಲಿ: ಹನುಮಾನ್​ ದೇವಸ್ಥಾನದಿಂದ ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ದಾರಿ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಆಸಿಡ್​ ಸುರಿದಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಸೆಕ್ಟರ್-43ರಲ್ಲಿನ ಹನುಮಾನ್ ದೇವಸ್ಥಾನಕ್ಕೆ ಶುಕ್ರವಾರ ಸಂಜೆ ಪೂನಂ ಯಾದವ್ ಹೋಗಿದ್ದು, ಪೂಜೆ ನಂತರ ಮನೆಯ ಕಡೆಗೆ ಬರುತ್ತಿದ್ದರು. ಈ ವೇಳೆ ಬೈಕ್ ಮೇಲೆ ಬಂದ ಇಬ್ಬರು ಯುವಕರು ಆಕೆಯನ್ನು ದಾರಿ ಕೇಳುವ ನೆಪದಲ್ಲಿ ತಡೆದಿದ್ದಾರೆ. ಇದಾದ ಬಳಿಕ ಅವರ ಮೇಲೆ ಕೆಮಿಕಲ್(ಆಸಿಡ್​) ಸುರಿದಿದ್ದಾರೆ.

ಇದರಿಂದ ಅವರ ದೇಹದಲ್ಲಿ ಸುಡುವ ಸಂವೇದನೆ ಪ್ರಾರಂಭವಾಗಿದೆ. ನೋವು ತಾಳದೆ ಮಹಿಳೆ ಕಿರುಚಿಕೊಂಡಿದ್ದಾರೆ. ಆಗ ಕ್ ಸವಾರ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಮಹಿಳೆಯ ದೂರಿನ ಮೇರೆಗೆ ಸುಶಾಂತ್ ಲೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ದೆಹಲಿಯ ಪಶ್ಚಿಮ ವಿಹಾರ್ ಪೊಲೀಸ್ ಠಾಣೆಯಲ್ಲಿ ಇಬ್ಬರು ದುಷ್ಕರ್ಮಿಗಳ ವಿರುದ್ಧ ದೂರು ನೀಡಿರುವ ಕಾರಣ ತನಗೆ ಈ ಬೆದರಿಕೆ ಹಾಕಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಆಸಿಡ್​ ಎರಚಿದ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಪೊಲೀಸರು ಮುಂದಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net