More

    ಹುಟ್ಟುತ್ತಲೇ ದಾಖಲೆ ಬರೆದ ದೈತ್ಯ ಮಗು: 6.5 ಕೇಜಿ ತೂಗಿದ ಶಿಶು

    ಕೆನಡಾ: ಆಗ ತಾನೇ ಹುಟ್ಟಿದ ಮಕ್ಕಳು ಸಾಮಾನ್ಯವಾಗಿ ಮೂರು ಕೇಜಿ ಅದಕ್ಕೂ ಹೆಚ್ಚೆಂದರೆ 4 ಕೇಜಿ. ಆದರೆ ಕೆನಡಾದಲ್ಲಿ ಆಗ ತಾನೆ ಹುಟ್ಟಿದ ಮಗುವೊಂದು 6. 5 ಕೆಜಿ ತೂಗುವ ಮೂಲಕ ದಾಖಲೆ ಬರೆದಿದೆ.

    ಕೆನಡಾ ದಂಪತಿಗಳಾದ ಬ್ರಿಟ್ನಿ ಐರಿ ಹಾಗೂ ಚಾನ್ಸ್‌ ಐರಿ ತಮ್ಮ 5ನೇ ಮಗುವಿಗೆ ಜನ್ಮ ನೀಡಿದ್ದು, 6.5 ಕೆಜಿ ತೂಗುವ ಮಗುವೊಂದಕ್ಕೆ ಸಿಸೇರಿಯನ್ ಮೂಲಕ ಜನ್ಮ ನೀಡಿದ್ದು, 13 ವರ್ಷಗಳಲ್ಲೇ ಇಷ್ಟು ತೂಕದ ಮಗುವೊಂದು ಜನಿಸಿದ್ದು ಇದೇ ಮೊದಲಾಗಿದೆ.

    ಮಗುವನ್ನು ನೋಡಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದರೆ.  ಮಗುವಿಗೆ ಸೋನಿ ಐರಿ ಎಂದು ಹೆಸರಿಡಲಾಗಿದೆ. ಅಕ್ಟೋಬರ್ 23 ರಂದು ಕೇಂಬ್ರಿಡ್ಜ್‌ನ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸೋನಿ ಐರಿ ಹುಟ್ಟಿದ್ದಾನೆ.

    ಮಗು ಜನಿಸಿದ ಕೇಂಬ್ರಿಡ್ಜ್ ಆಸ್ಪತ್ರೆಯ ಪಾಲಿಗೂ ಇದೊಂದು ದಾಖಲೆ ಎನಿಸಿದೆ. ಇದಕ್ಕೂ ಮೊದಲು ಈ ದಂಪತಿಗೆ ಮೂರು ಗಂಡು ಹಾಗೂ ಒಂದು ಹೆಣ್ಣು ಮಕ್ಕಳು ಈ ದಂಪತಿಗೆ ಜನಿಸಿವೆ. ಚಾನ್ಸ್ ಜೂನಿಯರ್‌, ಇವರಿಟಿ, ಲಕ್ಕಿ, ಹಾಗೂ ಇವರೆಲ್ಲರಿಗಿಂತ ದೊಡ್ಡವಳಾದ ಸೋದರಿ ಮಾರಿಗೋಲ್ಡ್, ಇವರಲ್ಲಿ ಮಾರಿಗೋಲ್ಡ್ ಹುಟ್ಟುತ್ತಲೇ 13 ಪೌಂಡ್ 14 ಔನ್ಸ್‌ ತೂಗುತ್ತಿದ್ದಳು. ಇದಾದ ನಂತರ ಲಕ್ಕಿ13 ಪೌಂಡ್ 11 ಔನ್ಸ್ ತೂಗುತ್ತಿದ್ದ. ಇವರ ಕುಟುಂಬದಲ್ಲಿ ಭಾರಿ ಗಾತ್ರ ಮಕ್ಕಳು ಜನಿಸಿದ ಪ್ರಕರಣ ಹೊಸದೇನು ಅಲ್ಲ. ಆದರೆ ಈ ಸೋನಿ ಇವರೆಲ್ಲರ ತೂಕದ ದಾಖಲೆ ಮುರಿದಿದ್ದು, 14 ಪೌಂಡ್ ತೂಗುತ್ತಿದ್ದಾನೆ. ಮಗುವನ್ನು ನೋಡಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದರೆ.

    ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತ; ಐವರು ಸಾವು, 60 ಮಂದಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts