More

    ಕಾಶ್ಮೀರ ಬಯೋತ್ಪಾದನೆಗೆ ದುಬೈ ನಿಧಿ! ಎಸ್‌ಐಎ ದಾಳಿಯಲ್ಲಿ ಪತ್ತೆಯಾಗಿದ್ದೇನು?

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಬಯೋತ್ಪಾದನೆಗೆಂದು 85 ಕೋಟಿ ರೂ.ನಿಧಿ ಸಂಗ್ರಹ ಮಾಡಿರುವುದು ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ರಾಜ್ಯ ತನಿಖಾ ಸಂಸ್ಥೆ (ಎಸ್‌ಐಎ) ಕಾಶ್ಮೀರ ಕಣಿವೆಯ ಶ್ರೀನಗರ, ಅನಂತನಾಗ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ನಾನಾ ಕಡೆ ಶೋಧ ಕಾರ್ಯ ನಡೆಸುತ್ಸತಿದೆ.

    ಶ್ರೀನಗರದ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪ್ರಮುಖ ಉದ್ಯಮಿಗೆ ಸೇರಿದ ಸ್ಥಳಗಳ ಮೇಲೆ ಸಹ ದಾಳಿ ನಡೆಸಸಲಾಗಿದೆ. ಇದು ಇತ್ತೀಚೆಗೆ ದೇಶದಲ್ಲಿ ಬಹಿರಂಗಗೊಂಡ ಅತಿದೊಡ್ಡ ಭಯೋತ್ಪಾದಕ ನಿಧಿ ಸಂಗ್ರಹ ಪ್ರಕರಣವಾಗಿದೆ. 

    ಇದನ್ನೂ ಓದಿ: ದೀಪಾವಳಿಗೆ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ ‘ಡ್ರೀಮ್ ಗರ್ಲ್
    ರಹಸ್ಯ ಮಾರ್ಗಗಳ ಮೂಲಕ ಹಣ ಸಂಗ್ರಹ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದಕ್ಕೆ ಧನಸಹಾಯ ಮಾಡಲು ಈ ನಿಧಿ ಬಳಸಲಾಗಿದೆ ಎಂದು ಶಂಕಿಸಲಾಗಿದೆ. ಶೋಧದ ಸಮಯದಲ್ಲಿ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಸೇರಿ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಐಎ ಹೇಳಿದೆ.

    ಎಸ್‌ಐಎ ಪ್ರಕಾರ ವಿಚಾರಣೆ ಸಂದರ್ಭ 85 ಕೋಟಿ ರೂ.ಗೂ ಅಧಿಕ ಮೊತ್ತದ ಅಕ್ರಮ ಹಣ ವರ್ಗಾವಣೆ ನಡೆದಿದೆ. ಆಗಸ್ಟ್‌ನಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕೃತ್ಯದ ಹಿಂದಿನ ಶಕ್ತಿಗಳನ್ನು ಹೊರಗೆಡುವುದರ ಜತೆಗೆ ಎಲ್ಲ ಭಾಗಿದಾರರನ್ನು ಪತ್ತೆಹಚ್ಚಲಾಗುವುದು ಎಂದು ಪುನರುಚ್ಚರಿಸಿದೆ.
    ಮನಿ ಲಾಂಡರಿಂಗ್ ಜಾಲವು ದುಬೈ ಸಂಪರ್ಕ ಹೊಂದಿದೆ. ಬುಧವಾರದಿಂದ ಕಾಶ್ಮೀರ ಮತ್ತು ನವದೆಹಲಿಯಲ್ಲಿ ನಡೆಸಿದ ದಾಳಿಗಳು ಈ ಸಂಬಂಧವನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಬುಧವಾರ ಎಸ್‌ಐಎ ದಾಳಿ ನಡೆಸಿದ 22 ಸ್ಥಳಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಮತ್ತು ಪ್ರಮುಖ ಉದ್ಯಮಿಗೆ ಸೇರಿದ ಸ್ಥಳಗಳೂ ಇವೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.

    ಚಿನ್ನದ ಕಳ್ಳಸಾಗಣೆ ಮತ್ತು ಇತರ ವಿಧಾನಗಳ ಮೂಲಕ ಮಾಡಿದ ಬೃಹತ್ ಹಣ ವರ್ಗಾವಣೆಯು ಕಾಶ್ಮೀರದಲ್ಲಿ ಈ ಹಿಂದೆ ಭಯೋತ್ಪಾದನೆಗೆ ಹಣ ಒದಗಿಸಿದ ಪ್ರಕರಣಗಳನ್ನು ಪೊಲೀಸರು ಮತ್ತು ಇತರ ಭದ್ರತಾ ಏಜೆನ್ಸಿಗಳು ಪತ್ತೆಹಚ್ಚಿದ್ದು, ಅವೆಲ್ಲಕ್ಕಿಂತ ದೊಡ್ಡ ಹಗರಣ ಇದಾಗಿದೆ.

    ಶುಕ್ರವಾರ ಬೆಳಿಗ್ಗೆ ಶ್ರೀನಗರ, ಪುಲ್ವಾಮಾ ಮತ್ತು ಅನಂತನಾಗ್ ಜಿಲ್ಲೆಗಳ 10 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಈ ಸಂದರ್ಭ ದೋಷಾರೋಪಣೆಯ ವಸ್ತುಗಳು, ಗ್ಯಾಜೆಟ್‌ಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತುಹಾಕಲು ರಾಜ್ಯ ತನಿಖಾ ಸಂಸ್ಥೆ ಸಂಕಲ್ಪ ಮಾಡಿದೆ ಎಂದು ಎಸ್​ಐಎ ಮತ್ತೊಮ್ಮೆ ದೃಢಪಡಿಸಿದೆ.

    ರಾಷ್ಟ್ರೀಯ ಶಿಕ್ಷಣ ದಿನ 2023: ಮೌಲಾನಾ ಅಬುಲ್ ಕಲಾಂ ಆಜಾದ್ ಜನ್ಮ ದಿನದ ಸವಿನೆನಪು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts