More

  ಮುಂಬೈ ಹೋಟೆಲ್​ನಲ್ಲಿ ಆ ಕರಾಳ ರಾತ್ರಿ! ಪ್ರವಾಸದ ಮಧ್ಯೆ ಕಾಶ್ಮೀರದ 500 ವಿದ್ಯಾರ್ಥಿನಿಯರಿಗೆ ಕಾದಿತ್ತು ಆಘಾತ

  ಮುಂಬೈ: ದೇಶ ಪ್ರವಾಸದಲ್ಲಿದ್ದ ಜಮ್ಮು ಮತ್ತು ಕಾಶ್ಮೀರ ಕಾಲೇಜಿನ ಸುಮಾರು 500 ವಿದ್ಯಾರ್ಥಿನಿಯರು ವಾಣಿಜ್ಯ ನಗರಿ ಮುಂಬೈನ ಹೋಟೆಲ್​ ಒಂದರಲ್ಲಿ ಅನುಭವಿಸಿದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿದ್ದಾರೆ.

  ಹೋಟೆಲ್​ನ ರೂಮ್​ಗಳು ಕೊಳಕು, ದುರ್ವಾಸನೆ ಮತ್ತು ಕಳಪೆ ವ್ಯವಸ್ಥೆಗಳಿಂದ ತುಂಬಿರುವುದಲ್ಲದೆ, ಹೋಟೆಲ್​​ ಕುರಿತಾಗಿ ಅಂತರ್ಜಾಲದಲ್ಲಿರುವ ವಿಮರ್ಶೆಗಳನ್ನು ನೋಡಿ ವಿದ್ಯಾರ್ಥನಿಯರು ಅಸುರಕ್ಷಿತ ಎಂದ ಭಯಬಿದ್ದಿದ್ದಾರೆ. ಏಕೆಂದರೆ, ವಿಮರ್ಶೆಗಳ ಪ್ರಕಾರ ಆ ಹೋಟೆಲ್​ನಲ್ಲಿ ವೇಶ್ಯಾವಾಟಿಕೆ ದಂಧೆ​ ಮತ್ತು ಉದ್ಯೋಗಿಗಳ ಮೊಬೈಲ್​ ಫೋನ್​ನಲ್ಲಿ ಮಹಿಳೆಯರ ಬೆತ್ತಲೆ ಫೋಟೋಗಳು ಪತ್ತೆಯಾಗಿವೆ ಎಂದು ಹೇಳಲಾಗಿದೆ.

  ಸುಮಾರು 800 ವಿದ್ಯಾರ್ಥಿಗಳು ನವೆಂಬರ್ 19ರಂದು ಜಮ್ಮುವಿನ ಕತ್ರಾದಿಂದ ಕಾಲೇಜ್ ಆನ್ ವೀಲ್ಸ್ ಎಂದೂ ಕರೆಯಲ್ಪಡುವ ಜ್ಞಾನೋದಯ ಎಕ್ಸ್‌ಪ್ರೆಸ್ ಪ್ರವಾಸವನ್ನು ಪ್ರಾರಂಭಿಸಿದರು. ಐದು ದಿನಗಳ ನಂತರ ವಿದ್ಯಾರ್ಥಿಗಳು ಮುಂಬೈ ತಲುಪಿದ್ದರು. ಇದರಲ್ಲಿ ಸುಮಾರು 500 ವಿದ್ಯಾರ್ಥಿಗಳನ್ನು ಗೋರೆಗಾಂವ್​ನಲ್ಲಿರುವ ರಾಯಲ್​ ಪಾಮ್​ ಹೋಟೆಲ್​ನಲ್ಲಿ ಇರಿಸಲಾಯಿತು. ಉಳಿದವರಿಗೆ ಸಕಿನಕ ಹೋಟೆಲ್​ನಲ್ಲಿ ರೂಮ್​ಗಳನ್ನು ನೀಡಲಾಯಿತು. ಆದಾಗ್ಯೂ ಎಲ್ಲ ವಿದ್ಯಾರ್ಥಿಗಳಿಗೂ ರಾಯಲ್​ ಪಾಮ್​ ಹೋಟೆಲ್​ನಲ್ಲೇ ಊಟಕ್ಕೆ ವ್ಯವಸ್ಥೆ ಮಾಡಲಾಗಿತ್ತು ಎಂದು ವಿದ್ಯಾರ್ಥಿಗಳ ಜತೆ ಬಂದಿದ್ದ ಪ್ರೋಫೆಸರ್​ ರಾಜೇಶ್​ ಸಿಂಗ್​ ತಿಳಿಸಿದ್ದಾರೆ.

  ವಿಶೇಷವಾಗಿ ದೆಹಲಿ ಮತ್ತು ಅಹಮದಾಬಾದ್‌ನಲ್ಲಿನ ಅವರ ಅನುಭವಗಳ ನಂತರ ಈ ಹೋಟೆಲ್ ಅನ್ನು ಕೂಡ ಸಮಾನವಾಗಿ ಕಂಡುಕೊಂಡರು. ಹೋಟೆಲ್​ನ ಕೋಣೆಗಳು ದುರ್ವಾಸನೆಯಿಂದ ಕೂಡಿದ್ದವು. ಬೆಡ್​ಶೀಟ್‌ಗಳು ಕಲೆಗಳನ್ನು ಹೊಂದಿದ್ದವು ಮತ್ತು ವಿದ್ಯಾರ್ಥಿಗಳಿಗೆ ತೀವ್ರ ಅನಾನುಕೂಲತೆಯನ್ನು ಉಂಟುಮಾಡಿದವು ಎಂದು ಸಿಂಗ್ ಹೇಳಿದರು. ಅದರಲ್ಲೂ ಹೋಟೆಲ್ ಕುರಿತ ವಿಮರ್ಶೆಗಳಿಗಾಗಿ ಆನ್‌ಲೈನ್‌ನಲ್ಲಿ ಹುಡುಕಾಡುವಾಗ ರಾಯಲ್ ಪಾಮ್ಸ್‌ನಲ್ಲಿ ಹೈ-ಪ್ರೊಫೈಲ್ ಸೆಕ್ಸ್ ರಾಕೆಟ್ ಅನ್ನು ಭೇದಿಸಲಾಗಿದೆ ಎಂಬ ಸುದ್ದಿಯನ್ನು ಕಂಡುಕೊಂಡ ನಂತರವಂತೂ ವಿದ್ಯಾರ್ಥಿಗಳು ಇನ್ನಷ್ಟು ವಿಚಲಿತರಾದರು.

  800 ಮಂದಿಗೆ ಊಟದ ವ್ಯವಸ್ಥೆ ಮಾಡಬೇಕಾಗಿತ್ತು. ಆದರೆ, ಟೇಬಲ್ ವ್ಯವಸ್ಥೆಯು ಕೇವಲ 100 ಮಂದಿಗೆ ಸೀಮಿತವಾಗಿತ್ತು ಮತ್ತು ಅವ್ಯವಸ್ಥೆಗೆ ಕಾರಣವಾಯಿತು. ರಾತ್ರಿಯ ಊಟದ ಬಳಿಕ ಸುಮಾರು 20-25 ನಿಮಿಷಗಳ ಕಾಲ ಲೈಟ್ಸ್​ ಆಫ್ ಆಗಿದ್ದವು, ಮೊದಲಿಗೆ ಇದು ವಿದ್ಯುತ್ ವೈಫಲ್ಯ ಎಂದು ವಿದ್ಯಾರ್ಥಿಗಳು ಭಾವಿಸಿದ್ದರು. ಆದರೆ, ಕೆಲವು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಅತಿಥಿಗಳನ್ನು ದೂರ ಸರಿಸಲು ಲೈಟ್ಸ್​ ಆಫ್ ಮಾಡಲಾಗಿದೆ ಎಂಬುದು ಗೊತ್ತಾಯಿತು. ಇದೇ ವಿಚಾರವಾಗಿ ಸಿಬ್ಬಂದಿಯೊಂದಿಗೆ ವಾಗ್ವಾದ ಸಹ ನಡೆಯಿತು. ಈ ವೇಳೆ ಉದ್ಯೋಗಿಯೊಬ್ಬ ರೆಕಾರ್ಡ್ ಮಾಡಲು ಆರಂಭಿಸಿದಾಗ, ರೆಕಾರ್ಡಿಂಗ್​ ಅಳಿಸಲು ವಿದ್ಯಾರ್ಥಿಗಳು ಮೊಬೈಲ್ ಕಸಿದುಕೊಂಡರು. ಈ ಪ್ರಕ್ರಿಯೆಯಲ್ಲಿ ಉದ್ಯೋಗಿಯ ಫೋನ್​ನಲ್ಲಿ ನಗ್ನ ಫೋಟೋಗಳನ್ನು ಕಂಡು ವಿದ್ಯಾರ್ಥಿಗಳ ಆತಂಕ ಇನ್ನಷ್ಟು ಹೆಚ್ಚಾಯಿತು. ಬಳಿಕ ಹೋಟೆಲ್​ ರೂಮ್​ಗಳನ್ನು ಬಿಟ್ಟು ಎಲ್ಲರೂ ಕಾರಿಡಾರ್‌ನಲ್ಲಿ ಮಲಗಲು ಬಯಸಿ, ಹಾಸಿಗೆಗಳನ್ನು ನೀಡುವಂತೆ ವಿನಂತಿ ಮಾಡಿದರು. ಆದರೆ, ಹೋಟೆಲ್​ನವರು ಅದನ್ನು ತಿರಸ್ಕರಿಸಿದರು. ನಾವು ಅತಿ ಕೆಟ್ಟ ಅನುಭವ ಹೊಂದಿದ್ದೇವೆ. ಹೀಗಾಗಿ ನಮ್ಮಲ್ಲಿ ಯಾರೊಬ್ಬರು ಇಡೀ ರಾತ್ರಿ ಇಲ್ಲಿ ಮಲಗಲು ಸಾಧ್ಯವಾಗಲಿಲ್ಲ ಎಂದು ಪ್ರೋಫೆಸರ್​ ಸಿಂಗ್ ಹೇಳಿದರು.

  ಇದೇ ಸಂದರ್ಭದಲ್ಲಿ ರಾಯಲ್ ಪಾಮ್ಸ್‌ ಮಾಲೀಕರಲ್ಲಿ ಒಬ್ಬರಾದ ದಿಲಾವರ್ ನೆನ್ಸಿಗೆ ಫೋನ್​ ಕರೆ ಮತ್ತು ಮೆಸೇಜ್​ಗಳನ್ನು ಮಾಡಲಾಯಿತು. ಆದರೆ, ಯಾವುದಕ್ಕೂ ಉತ್ತರ ಬರಲಿಲ್ಲ. ಈ ಪ್ರವಾಸಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು 4.8 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ಐಆರ್​ಸಿಟಿಸಿ ಕೂಡ ಪಾಲುದಾರಿಕೆಯನ್ನು ಹೊಂದಿದೆ ಎಂದು ಸಿಂಗ್ ಸೇರಿಸಿದರು. ಘಟನೆಯ ಬಗ್ಗೆ IRCTC ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸೀಮಾ ಕುಮಾರ್ ಮಾತನಾಡಿ, ನಾವು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ಹೋಟೆಲ್​ನ ಗುತ್ತಿಗೆದಾರರ ವಿರುದ್ಧ ಮಾತ್ರವಲ್ಲದೆ ಉದ್ಯೋಗಿಗಳ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

  ಹೃದಯವಿದ್ರಾವಕ…ಉತ್ತರಕಾಶಿ ಸುರಂಗದಿಂದ ಮಗ ಹೊರಬಂದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ತಂದೆ

  ತೆಲಂಗಾಣ ಚುನಾವಣೆ: ಬೆಳಿಗ್ಗೆಯೇ ಉತ್ಸಾಹದಿಂದ ಮತ ಚಲಾಯಿಸಿದ ಸ್ಟಾರ್​ ನಟರು, ವಿಶೇಷ ಗಮನ ಸೆಳೆದ Jr NTR

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts