More

    ಹೃದಯವಿದ್ರಾವಕ…ಉತ್ತರಕಾಶಿ ಸುರಂಗದಿಂದ ಮಗ ಹೊರಬಂದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದ ತಂದೆ

    ರಾಂಚಿ: ಉತ್ತರಾಖಂಡದಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಿಂದ ಹೊರಬಂದ 41 ಕಾರ್ಮಿಕರ ಪೈಕಿ ಕೆಲವರಿಗೆ ಸಂತೋಷದ ಸುದ್ದಿ, ಮತ್ತೆ ಕೆಲವರಿಗೆ ದುಃಖದ ಕ್ಷಣಗಳು ಏಕಕಾಲದಲ್ಲಿ ಒದಗಿಬಂದಿದೆ. ವರದಿಗಳ ಪ್ರಕಾರ, ಜಾರ್ಖಂಡ್‌ನ ನಿವಾಸಿ ಬಕ್ತು ಮುರ್ಮು ಅವರ ತಂದೆ, ಮಗ ಸುರಂಗದಿಂದ ಹೊರಬರುವ ಕೆಲವೇ ಗಂಟೆಗಳ ಮೊದಲು ನಿಧನರಾದರು. 70 ವರ್ಷದ ಬರ್ಸಾ ಮುರ್ಮು ತನ್ನ ಮಗ ಸುರಂಗದಲ್ಲಿ ಸಿಲುಕಿಕೊಂಡಿದ್ದಾನೆ ಎಂಬ ಆತಂಕದಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಕುಟುಂಬ ಹೇಳಿಕೊಂಡಿದೆ.  

    ಮಂಚದ ಮೇಲೆ ಕುಳಿತಿದ್ದಾಗಲೇ ಪ್ರಾಣ ಬಿಟ್ಟರು
    ನವೆಂಬರ್ 12 ರಂದು ಸುರಂಗ ಕುಸಿತದ ಸುದ್ದಿ ಕೇಳಿದ ನಂತರ ಮುರ್ಮು ಅವರು ತಮ್ಮ ಮಗ ಬಕ್ತು ಬಗ್ಗೆ ಚಿಂತಿತರಾಗಿದ್ದರು ಎಂದು ಬಕ್ತು ಮುರ್ಮು ಅವರ ಕುಟುಂಬ ಸದಸ್ಯರು ಬುಧವಾರ ಹೇಳಿದ್ದಾರೆ. ಪೂರ್ವ ಸಿಂಗ್‌ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಮುರ್ಮು ಮಂಗಳವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಹಾಸಿಗೆಯ ಮೇಲೆ ಕುಳಿತಿದ್ದಾಗ ಸಾವನ್ನಪ್ಪಿದ್ದಾರೆ. ಸ್ಥಳೀಯ ಸರ್ಕಾರಿ ಅಧಿಕಾರಿಗಳು ಅವರು ಸಾವಿನ ಕಾರಣವನ್ನು ದೃಢೀಕರಿಸಲು ಹೇಳಿದಾಗ ಮುರ್ಮು ಬಹುಶಃ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ತಿಳಿದುಬಂದಿದೆ. ಅಂದಹಾಗೆ ಇಷ್ಟು ದಿನಗಳ ಕಾಲ ಸುರಂಗದಲ್ಲಿ ತಂಗಿದ್ದರೂ, ಎಲ್ಲಾ ಕೆಲಸಗಾರರು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿದ್ದಾರೆ.

    ದುರಸ್ತಿ ನಂತರ ಕಾಮಗಾರಿ ಆರಂಭ
    ಸಿಲ್ಕ್ಯಾರಾ ಸುರಂಗದಿಂದ ರಕ್ಷಿಸಲಾದ ಎಲ್ಲಾ 41 ಕಾರ್ಮಿಕರನ್ನು ಬುಧವಾರ ರಿಷಿಕೇಶ ಏಮ್ಸ್‌ಗೆ ವಿಮಾನದಲ್ಲಿ ರವಾನಿಸಲಾಯಿತು. ಅಲ್ಲಿ ಅವರ ಆರೋಗ್ಯ ತಪಾಸಣೆ ಮಾಡಲಾಯಿತು. ಸಿಲ್ಕ್ಯಾರಾ ಸುರಂಗವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 900 ಕಿಮೀ ಉದ್ದದ ಮತ್ತು ‘ಚಾರ್ ಧಾಮ್ ಯಾತ್ರಾ ರಸ್ತೆ’ಯ ಭಾಗವಾಗಿದೆ ಎಂದು ರಸ್ತೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉತ್ತರಾಖಂಡದ 4.5 ಕಿ.ಮೀ ಉದ್ದದ ಸಿಲ್ಕ್ಯಾರಾ ಸುರಂಗ ಯೋಜನೆಯು ದುರಸ್ತಿ ನಂತರ ಪುನರಾರಂಭಗೊಳ್ಳಲಿದೆ ಎಂದು ಅವರು ಹೇಳಿದರು. ಮಂಗಳವಾರ ರಾತ್ರಿ, 17ನೇ ದಿನವಾದ ರಕ್ಷಣಾ ಕಾರ್ಯಾಚರಣೆಯಲ್ಲಿ, ಸುರಂಗದಲ್ಲಿ ಸಿಲುಕಿದ್ದ ಎಲ್ಲಾ 41 ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

    ಗ್ರೇಟ್‌ ಸುರಂಗ ಆಪರೇಷನ್‌ ಕುರಿತು ಸಿನಿಮಾ ನಿರ್ಮಿಸಲು ಹರಿದುಬರುತ್ತಿದೆ ಶೀರ್ಷಿಕೆಗಳ ಮಹಾಪೂರ: ಕೇಳಿಬಂತು ಈ ನಟರ ಹೆಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts