More

    ಖಾತ್ರಿ ಕೂಲಿ ಸಮರ್ಪಕ ಪಾವತಿಸಿ

    ಕುರುಗೋಡು: ನರೇಗಾ ಕೂಲಿ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಸಿಂದಿಗೇರಿ ಗ್ರಾಪಂಗೆ ಮುತ್ತಿಗೆ ಹಾಕಿದ ಕೂಲಿ ಕಾರ್ಮಿಕರು ಕಚೇರಿಗೆ ಬೀಗ ಹಾಕಿ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಪಂ ಸದಸ್ಯ ಮಂಜುನಾಥ ಮಾತನಾಡಿ, ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ. ಕೆಲಸ ಮಾಡಿರುವ ಕಾರ್ಮಿಕರಿಗೆ ಕೂಲಿ ನೀಡದೆ ಮನೆಯಲ್ಲಿರುವ ಕಾರ್ಮಿಕರಿಗೆ ಕೂಲಿ ಪಾವತಿಸುತ್ತಿದ್ದಾರೆ. ಬೈಲೂರು, ಸಿಂದಿಗೇರಿ ಗ್ರಾಮದ 750 ಕಾರ್ಮಿಕರು ನಿತ್ಯ ನರೇಗಾ ಕೆಲಸಕ್ಕೆ ಹೋಗುತ್ತಿದ್ದು, ಅವರಿಗೆ ದಿನಕ್ಕೆ 349 ರೂ. ಬದಲಿಗೆ 120 ರೂ. ನೀಡಲಾಗುತ್ತಿದೆ ಎಂದು ಆರೋಪಿಸಿದರು.

    ಅಧಿಕಾರಿಗಳೇ ತಾರತಮ್ಯ ಧೋರಣೆ ಮೂಲಕ ಕಾರ್ಮಿಕರು ಗುಳೆ ಹೋಗುವಂತೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ. ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಹಣ ನೀಡಬೇಕು ಎಂದು ಮಂಜುನಾಥ ಆಗ್ರಹಿಸಿದರು. ಗಾದಿಲಿಂಗ, ಲಿಂಗಪ್ಪ, ಶಿವರಾಜ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts