More

    ಗ್ರೇಟ್‌ ಸುರಂಗ ಆಪರೇಷನ್‌ ಕುರಿತು ಸಿನಿಮಾ ನಿರ್ಮಿಸಲು ಹರಿದುಬರುತ್ತಿದೆ ಶೀರ್ಷಿಕೆಗಳ ಮಹಾಪೂರ: ಕೇಳಿಬಂತು ಈ ನಟರ ಹೆಸರು

    ಮುಂಬೈ: ಉತ್ತರಕಾಶಿ ಟನಲ್ ರೆಸ್ಕ್ಯೂ ಅಥವಾ ಉತ್ತರಾಖಂಡ್ ಟನಲ್ ಅಪರೇಷನ್ ರೆಸ್ಕ್ಯೂ ಕೊನೆಗೂ ಯಶಸ್ವಿಯಾಗಿದೆ. ಕಳೆದ 17 ದಿನಗಳಿಂದ ನಿರ್ಮಾಣ ಹಂತದಲ್ಲಿರುವ ಉತ್ತರಕಾಶಿಯ ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರು ಇದೀಗ ಹೊಸ ಬದುಕು ಕಟ್ಟಿಕೊಂಡಿದ್ದಾರೆ. ಈ ಎಲ್ಲಾ ಕಾರ್ಮಿಕರು 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದರು. ಆಗಸ್ಟ್ 28 ರ ಸಂಜೆ ಅವರನ್ನು ರಕ್ಷಿಸಲಾಯಿತು. ಈ ಎಲ್ಲ ಕಾರ್ಮಿಕರನ್ನು ಅವರ ಮನೆಗೆ ಕಳುಹಿಸಲಾಗಿದ್ದು, ಕೆಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಮಿಕರು ಸುರಂಗದಿಂದ ಜೀವಂತವಾಗಿ ಹಿಂತಿರುಗಿದಾಗ ಇಡೀ ದೇಶವು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಬಾಲಿವುಡ್ ತಾರೆಯರು ಸಹ ರಕ್ಷಣಾ ತಂಡಕ್ಕೆ ಮನಃಪೂರ್ವಕವಾಗಿ ಧನ್ಯವಾದ ಹೇಳಿದ್ದಾರೆ.  

    ಇದೀಗ ಈ ರೆಸ್ಕ್ಯೂ ಕುರಿತು ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ಪೈಪೋಟಿ ನಡೆದಿದೆ. ಈ ನಿಟ್ಟಿನಲ್ಲಿ, ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA), ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮತ್ತು ಇಂಡಿಯನ್ ಫಿಲ್ಮ್ ಆಂಡ್ ಟೆಲಿವಿಷನ್ ಪ್ರೊಡ್ಯೂಸರ್ಸ್ ಕೌನ್ಸಿಲ್ (IIFTPC) ಈ ಘಟನೆಯ ಕುರಿತು ಚಲನಚಿತ್ರ ಮಾಡಲು ಶೀರ್ಷಿಕೆ ಸ್ವೀಕರಿಸಿದೆ.

    ಈ ಘಟನೆಯ ಕುರಿತು ಹಲವಾರು ಚಲನಚಿತ್ರ ಶೀರ್ಷಿಕೆಗಳನ್ನು ತಮ್ಮ ಕಚೇರಿಗೆ ಕಳುಹಿಸಲಾಗಿದೆ ಎಂದು INMPPA ಅಧ್ಯಕ್ಷ ಮತ್ತು ನಟ ಅನಿಲ್ ನಾಗರತ್ ಹೇಳಿದ್ದಾರೆ. ಇದರಲ್ಲಿ ರೆಸ್ಕ್ಯೂ 41 ಮತ್ತು ಮಿಷನ್ 41: ದಿ ಗ್ರೇಟ್ ರೆಸ್ಕ್ಯೂ ಎಂಬ ಶೀರ್ಷಿಕೆಗಳನ್ನು ನೋಂದಾಯಿಸಲಾಗಿದೆ. ಮುಂದಿನ ಕೆಲವು ವಾರಗಳಲ್ಲಿ, ನಾವು ಈ ಶೀರ್ಷಿಕೆಗಳನ್ನು ಪರಿಶೀಲಿಸುತ್ತೇವೆ ಮತ್ತು ಮೊದಲು ಬಂದವರಿಗೆ ಚಲನಚಿತ್ರಗಳನ್ನು ಮಾಡಲು ಅನುಮತಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.  

    ಹಾಗೆಯೇ ವ್ಯಾಪಾರ ತಜ್ಞ ಗಿರೀಶ್ ವಾಂಖೆಡೆ, ಈ ರೆಸ್ಕ್ಯೂ ಕುರಿತು ಚಲನಚಿತ್ರವನ್ನು ನಿರ್ಮಿಸಿದರೆ ನೀವು ಯಾವ ನಟನ ಹೆಸರನ್ನು ಸೂಚಿಸುತ್ತೀರಿ ಎಂದಾಗ ಅಕ್ಷಯ್ ಕುಮಾ‌ರ್ ಹೆಸರನ್ನು ತೆಗೆದುಕೊಂಡರು. ಹಾಗೆಯೇ ಅಜಯ್ ದೇವಗನ್ ಅವರನ್ನು ಎರಡನೇ ಆಯ್ಕೆಯಲ್ಲಿ ಇರಿಸಲಾಗಿದೆ. ಅಂದಹಾಗೆ ಮಿಷನ್ ರಾಣಿಗಂಜ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕೊನೆಯದಾಗಿ ಕಾಣಿಸಿಕೊಂಡರು.

    ‘ಮಾನವ ಶ್ರಮದ ಜಯಭೇರಿ’: ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಿಸಿದ ರೀತಿಗೆ ಹಾಡಿಹೊಗಳಿದ ವಿದೇಶಿ ಮಾಧ್ಯಮಗಳು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts