

ವಿಜಯಪುರ: ಹೊಸ ವರ್ಷದ ಮುನ್ನಾ ದಿನವಾದ ಗುರುವಾರ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿ ಭೀಕರ ಅಪಘಾತ ಸಮಭವಿಸಿದ್ದು, ಅಜ್ಜಿಯರಿಬ್ಬರು ದುರ್ಮರಣಕ್ಕೀಡಾಗಿದ್ದಾರೆ.
ತಿಪ್ಪವ್ವ ಕಮತಗಿ(60) ಮತ್ತು ಗುರಬಾಯಿ ಗಣಿ(65) ಮೃತ ದುರ್ದೈವಿಗಳು. ಕೊಣ್ಣೂರಿನಿಂದ ಜಾಲವಾದ ಗ್ರಾಮಕ್ಕೆ ಟಂಟಂನಲ್ಲಿ ತೆರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಟಂಟಂ ಪಲ್ಟಿಯಾಗಿದ್ದು ಸ್ಥಳದಲ್ಲೇ ಇಬ್ಬರು ವೃದ್ಧೆಯರು ಪ್ರಾಣಬಿಟ್ಟಿದ್ದಾರೆ.
ಟಂಟಂನಲ್ಲಿದ್ದ ಆರು ಜನರು ಗಾಯಗೊಂಡಿದ್ದು, ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.