

ಬೆಳಗಾವಿ: ಅಥಣಿ ತಾಲೂಕಿನಲ್ಲಿ ನಡೆಯುತ್ತಿದ್ದ ಸಂಭ್ರಮದ ಹೋಳಿ ಆಚರಣೆಯಲ್ಲಿ ದುರಂತವೊಂದು ನಡೆದಿದೆ.
ಗುಂಡೇವಾಡಿ ಗ್ರಾಮದಲ್ಲಿ ಕೆಲವರು ತಮ್ಮತಮ್ಮಲ್ಲೇ ಬಣ್ಣ ಎರಚುತ್ತ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಈ ವೇಳೆ ವ್ಯಕ್ತಿಯೋರ್ವ ಬಣ್ಣ ಹಾಕಲು ಬಂದವರಿಂದ ತಪ್ಪಿಸಿಕೊಳ್ಳಲು ಓಡಿದ. ಆದರೆ ಅದೇ ವೇಳೆಗೆ ಮಹಾರಾಷ್ಟ್ರ ಕಡೆಯಿಂದ ಬರುತ್ತಿದ್ದ ಕಾರಿನಡಿ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಮೃತನನ್ನು ಕುಮಾರ್ ಮುರಗಪ್ಪ ಗುರುಪಾದಗೋಳ (34) ಎಂದು ಗುರುತಿಸಲಾಗಿದೆ. ಅಥಣಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)