ಪಿಕಪ್​ ಗಾಡಿ ಮತ್ತು ಓಮ್ನಿ ನಡುವೆ ಭೀಕರ ಅಪಘಾತ; ಇಬ್ಬರ ದುರ್ಮರಣ

accident
Published on

ಕೊಡಗು: ಶುಕ್ರವಾರ ಬೆಳಗ್ಗೆ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಪಿಕಪ್​ ಗಾಡಿ ಮತ್ತು ಓಮ್ನಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಇಬ್ಬರು ದುರ್ಮರಣಕ್ಕೀಡಾಗಿದ್ದಾರೆ.

ಮಡಿಕೇರಿ ತಾಲೂಕಿನ ಭೇತ್ರಿ ಬಳಿ ಅಪಘಾತ ಸಂಭವಿಸಿದೆ. ಓಮ್ನಿಯಲ್ಲಿ ಮೂರ್ನಾಡು ಗ್ರಾಮದ ಇಬ್ಬರು ಪ್ರಯಾಣಿಸುತ್ತಿದ್ದರು. ಅಪಘಾತದ ರಭಸಕ್ಕೆ ಓಮ್ನಿ ಕಾರು ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಹರೀಶ್​ ಹಾಗೂ ಸುಬ್ರಮಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net