

ಬೆಂಗಳೂರು: ಲಂಚ ಪಡೆದ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ ಎಎಸ್ಐ ದಯಾನಂದಸ್ವಾಮಿ ಅವರ ಮನೆಯ ಮೇಲೆ ಮಂಗಳವಾರದಂದು ಎಸಿಬಿ ದಾಳಿ ನಡೆದಿದೆ.
ಯಲಹಂಕ ನ್ಯೂ ಟೌನ್ನಲ್ಲಿರುವ ಕೊಡಿಗೇಹಳ್ಳಿ ಎಎಸ್ಐ ದಯಾನಂದ್ ಅವರ ಮನೆಯ ಮೇಲೆ ಎಸಿಬಿ ದಾಳಿಯಾಗಿದೆ. ಅವರು ಉದ್ಯಮಿಯೊಬ್ಬರಿಂದ ಲಂಚ ಪಡೆದಿರುವ ಆರೋಪವಿದ್ದು, ಅದು ನಿನ್ನೆಯಷ್ಟೇ ಸಾಬೀತಾಗಿತ್ತು. ಲೊಂಚ ಪಡೆದಿರುವುದು ಸತ್ಯ ಎಂದು ಗೊತ್ತಾದ ತಕ್ಷಣ ಕಮಿಷನರ್ ದಯಾನಂದ್ನನ್ನು ಕೆಲಸಿದಂದ ಅಮಾನತು ಮಾಡಿ ಎಸಿಬಿ ತನಿಖೆಗೆ ಆದೇಶಿಸಿದ್ದರು. ಆದೇಶ ಹಿನ್ನಲೆಯಲ್ಲಿ 15 ಅಧಿಕಾರಿಗಳ ತಂಡದಿಂದ ಮನೆಯ ಮೇಲೆ ದಾಳಿ ನಡೆಸಲಾಗಿದೆ.
ದಯಾನಂದ್ 2020ರಲ್ಲಿ ಹೆಡ್ ಕಾನ್ಸ್ಟೇಬಲ್ ಹುದ್ದೆಯಿಂದ ನಿಂದ ಎ.ಎಸ್.ಐ ಆಗಿ ಮುಂಬಡ್ತಿ ಪಡೆದಿದ್ದ. ಹೆಡ್ ಕಾನ್ಸ್ಟೇಬಲ್ ಆದಾಗಿನಿಂದಲೂ ಡಿಸಿಪಿ ಕಚೇರಿಯಲ್ಲಿ SB ಯಾಗಿ ಕೆಲಸ ನಿರ್ವಹಿಸಿದ್ದ. ಕಳೆದ ಆರು ವರ್ಷಗಳಿಂದ ಈಶಾನ್ಯ ವಿಭಾಗದ ಡಿಸಿಪಿ ಕಚೇರಿಯ SB ಸ್ಪೆಷಲ್ ಬ್ರಾಂಚ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ. ಆ ವಿಭಾಗಕ್ಕೆ ಡಿಸಿಪಿಯಾಗಿ ಬರುವ ಐಪಿಎಸ್ ಅಧಿಕಾರಿಗಳ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ. ಆತನಿಗೆ ತಿಂಗಳಿಗೆ ಸರ್ಕಾರದಿಂದ 55 ಸಾವಿರ ರೂಪಾಯಿ ಸಂಬಳ ಬರುತ್ತಿತ್ತು. ಯಲಹಂಕ ನ್ಯೂ ಟೌನ್ನಲ್ಲಿ 35/40 ಅಳತೆಯ ಮೂರು ಅಂತಸ್ತಿನ ಡುಪ್ಲೆಕ್ಸ್ ಮನೆ ಕಟ್ಟಿಸಿಕೊಂಡಿದ್ದ. ಮನೆ ನಿರ್ಮಾಣಕ್ಕೆ ಸುಮಾರು 5ರಿಂದ ಆರು ಕೋಟಿ ರೂಪಾಯಿ ಖರ್ಚು ಮಾಡಿದ್ದ ಎನ್ನಲಾಗಿದೆ.
ಬೆಂಗಳೂರು ಎಸಿಬಿ ಎಸ್.ಪಿ ಯತೀಶ್ ಚಂದ್ರ ನೇತೃತ್ವದಲ್ಲಿ ದಯಾನಂದ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಧ್ಯಾಹ್ನ 2 ಘಂಟೆಯಿಂದ ಮನೆಯಲ್ಲಿರುವ ಎಲ್ಲ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.