

ಬೆಂಗಳೂರು: ಲಾಕ್‌ಡೌನ್ ಜಾರಿಯಲ್ಲಿದ್ದರೂ ಯಾವುದೇ ಪಾಸ್ ಇಲ್ಲದೇ ಆಟೋದಲ್ಲಿ ಸಂಚರಿಸುತ್ತಿದ್ದ ಮಹಿಳೆಯನ್ನು ತಡೆದಿದ್ದಕ್ಕೆ ಆಕೆ ಪೊಲೀಸರೊಂದಿಗೇ ವಾಗ್ವಾದ ನಡೆಸಿದ್ದಾಳೆ.
ಸೋಮವಾರ ಬೆಳಗ್ಗೆ ಆಟೋವನ್ನು ಬಾಡಿಗೆ ಮಾಡಿಕೊಂಡು ಬಂದಿದ್ದ ಮಹಿಳೆಯನ್ನು ಕೆ.ಆರ್. ಸರ್ಕಲ್ ಬಳಿ ಪೊಲೀಸರು ತಡೆದಿದ್ದರು. ಪರಿಶೀಲನೆ ಮಾಡಿದಾಗ ಅವರೊಂದಿಗೆ ಆಕೆ ವಾಗ್ವಾದ ನಡೆಸಿದ್ದಾಳೆ.
‘‘ನಾನ್ಯಾರು ಗೊತ್ತಾ..? ನನಗೆ ಮಿನಿಸ್ಟರ್ ಗೊತ್ತು’’ ಅಂತ ಧಮಕಿ ಹಾಕಿದ್ದಾಳೆ. ಬಳಿಕ ಆಟೋದಿಂದ ಇಳಿದು ತಾನೇ ನಡೆದುಕೊಂಡು, ಕೂಗಾಡಿಕೊಂಡು ಹೋದಳು ಎನ್ನಲಾಗಿದೆ.
ಹಲಸೂರು ಗೇಟ್ ಸಂಚಾರ ಪೊಲೀಸರು ಆಟೋ ಜಪ್ತಿ ಮಾಡಿದ್ದಾರೆ. ಮಹಿಳೆಯ ದುರ್ವರ್ತನೆಯಿಂದಾಗಿ ಆಟೋ ಈಗ ಪೊಲೀಸ್ ವಶಕ್ಕೆ ಹೋಗಿದ್ದು, ಚಾಲಕನಿಗೆ ತೊಂದರೆಯಾದಂತಾಗಿದೆ.