

ಬೆಂಗಳೂರು: ಲಾಕ್‌ಡೌನ್ ನಿಯಮ ಉಲ್ಲಂಸಿ ಮದುವೆ ಕಾರ್ಯಕ್ರಮಕ್ಕೆ ರೆಸಾರ್ಟ್ ಬಾಡಿಗೆ ನೀಡಿದ ಆರೋಪದ ಮೇಲೆ ನಟ ಅಕುಲ್ ಬಾಲಾಜಿ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಡೆ ಕಾಯಿದೆಯಡಿ ದೂರು ದಾಖಲಾಗಿದೆ.
ಏಪ್ರಿಲ್ 18ರಂದು ತಾಲೂಕಿನ ಲಘುಮೇನಹಳ್ಳಿಯಲ್ಲಿನ ಅಕುಲ್ ಬಾಲಾಜಿ ಒಡೆತನದ ಸನ್‌ಶೈನ್ ರೆಸಾರ್ಟ್‌ನಲ್ಲಿ ಮದುವೆ ಕಾರ್ಯಕ್ರಮದ ಸಿದ್ಧತೆ ನಡೆದಿತ್ತು. ಬೆಂಗಳೂರಿನ ಥಣಿಸಂದ್ರದ 20ಕ್ಕೂ ಹೆಚ್ಚು ಮಂದಿ ರೆಸಾರ್ಟ್‌ಗೆ ಬಂದಿದ್ದರು. ಅಪರಿಚಿತರ ತಂಡ ಗ್ರಾಮಕ್ಕೆ ಬಂದಿರುವ ವಿಷಯ ತಿಳಿದ ಸ್ಥಳೀಯರು ಆತಂಕಗೊಂಡು ರೆಸಾರ್ಟ್‌ನಲ್ಲಿ ವಿಚಾರಿಸಿದಾಗ ಮದುವೆ ನಡೆಯುತ್ತಿರುವುದು ತಿಳಿದು ಬಂದಿದೆ.
ಕರೊನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ೋಷಿಸಿದ್ದರೂ ನಿಯಮ ಉಲ್ಲಂಸಿ ಮದುವೆ ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಅಕುಲ್ ಬಾಲಾಜಿ ಹಾಗೂ ವ್ಯವಹಾರ ಪಾಲುದಾರ ಶ್ರೀನಿವಾಸ ಸುಬ್ರಹ್ಮಣ್ಯಂ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.