ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತ ಅಂಬಿಗರ ಚೌಡಯ್ಯ

21 SARAG 1
Published on

ಸರಗೂರು: ನೇರ ನಡೆ-ನುಡಿಗಳಿಂದ ಸಮಾಜದ ಅಂಕು ಡೊಂಕು ತಿದ್ದಿ, ಮೂಢನಂಬಿಕೆಗಳನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ, ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣ ಸ್ವಾಮಿ ಅಭಿಪ್ರಾಯ ಪಟ್ಟರು.


ತಾಲೂಕಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾನುವಾರ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದ ಬಸವಣ್ಣವರ ಸಾಮಾಜಿಕ ಕ್ರಾಂತಿಗೆ ಬೆನ್ನೆಲುಬಾಗಿ ನಿಂತವರಲ್ಲಿ ಅಂಬಿಗರ ಚೌಡಯ್ಯ ಅಗ್ರಗಣ್ಯರು. ಚೌಡಯ್ಯ ಅವರು ದಿಟ್ಟತನದಿಂದ ಮಾತನಾಡುವುದಲ್ಲದೆ ನುಡಿದಂತೆ ನಡೆದವರು. ಸುಮಾರು 278 ವಚನಗಳನ್ನು ಬರೆದರು. ರಾಣಿಬೆನ್ನೂರು ತಾಲೂಕಿನ ತುಂಗಭದ್ರಾ ನದಿಯು ವಿಶಾಲವಾಗಿ ಹರಿಯುವ ದಡದಲ್ಲಿ ಚೌಡಯ್ಯ ಲಿಂಗೈಕರಾದ ಸ್ಥಳ ಈಗ ಪುಣ್ಯಕ್ಷೇತ್ರವಾಗಿದೆ. ಶರಣರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಹೇಳಿದರು.


ಗುರುರಾಜ್, ಮುಜೀಪ್, ಕಂದಲಿಕೆ ಶ್ರೀನಿವಾಸ್, ಪ್ರಕಾಶ್, ರಾಜಗೋಪಾಲ್, ಚಂದ್ರು, ಶಿವಣ್ಣ, ಶ್ರೀನಿವಾಸ್, ಬೆಟ್ಟರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net