ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್!

abhishek bachchan
Published on

ಮುಂಬೈ: ಬಾಲಿವುಡ್​​ ನಟ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ದಂಪತಿ ಪುತ್ರ ನಟ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ)ಗೆ ಸೇರುತ್ತಾರೆ, ಅಲಹಾಬಾದ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನು ಗುಸುಗುಸು ಶುರುವಾಗಿದೆ. ಆದರೆ ಪಕ್ಷದಿಂದಾಗಲಿ ಅಥವಾ ಅಭಿಷೇಕ್ ಬಚ್ಚನ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಭಿಷೇಕ್ ರಾಜಕೀಯಕ್ಕೆ ಸೇರುವ ವರದಿಗಳು ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿವೆ.

2013 ರಲ್ಲಿ ಸಂದರ್ಶನವೊಂದರಲ್ಲಿ ಅಭಿಷೇಕ್, "ನನ್ನ ಪೋಷಕರು ರಾಜಕೀಯದಲ್ಲಿದ್ದಾರೆ ಆದರೆ ನಾನು ಅದನ್ನೇ ಮಾಡುವುದಿಲ್ಲ. ನಾನು ತೆರೆಯ ಮೇಲೆ ರಾಜಕಾರಣಿಯ ಪಾತ್ರವನ್ನು ಮಾಡಬಹುದು ಆದರೆ ನಿಜ ಜೀವನದಲ್ಲಿ ಅದು ದೊಡ್ಡದು. ನಾನು ಎಂದಿಗೂ ಪ್ರವೇಶಿಸುವುದಿಲ್ಲ" ಎಂದಿದ್ದರು.

ಜಯಾ ಬಚ್ಚನ್ 2004 ರಲ್ಲಿ SP ಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು, ಮಾರ್ಚ್ 2006 ರವರೆಗೆ ಉತ್ತರ ಪ್ರದೇಶವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದರು. ಅವರು 2012 ರಲ್ಲಿ ಮೂರನೇ ಅವಧಿಗೆ ಮತ್ತು 2018 ರಲ್ಲಿ ನಾಲ್ಕನೇ ಅವಧಿಗೆ ಮರು ಆಯ್ಕೆಯಾದರು. 1984 ರಲ್ಲಿ, ಅಮಿತಾಬ್ ಬಚ್ಚನ್ ನಟನೆಯಿಂದ ವಿರಾಮ ತೆಗೆದುಕೊಂಡರು ಮತ್ತು ದೀರ್ಘಕಾಲದ ಕುಟುಂಬ ಸ್ನೇಹಿತ ರಾಜೀವ್ ಗಾಂಧಿಯ ಬೆಂಬಲಕ್ಕಾಗಿ ರಾಜಕೀಯ ಪ್ರವೇಶಿಸಿದರು. ಹೀಗೆ ಕುಟಂಬವೇ ರಾಜಕೀಯದಲ್ಲಿರುವಾಗ ಅಭಿಷೇಕ್ ಬಚ್ಚನ್ ಕೂಡಾ ಎಂಟ್ರಿ ಕೋಡ್ತಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net