

ಮುಂಬೈ:ಬಾಲಿವುಡ್ ದಿಗ್ಗಜ ಅಮಿತಾಬ್ ಕುಟುಂಬ ಸದಾ ಒಂದಲ್ಲೊಂದು ಸುದ್ದಿಯಲ್ಲಿರುತ್ತದೆ. ಇದೀಗ ಅಮಿತಾಬ್ ಪುತ್ರ ನಟ ಅಭಿಷೆಕ್ ಬಚ್ಚನ್ ಅವರು ಸಿನಿಮಾ ವಿಚಾರ ಅಲ್ಲದೆ ತಾವು ಕಟ್ಟಿರುವ ವಿಶೇಷ ವಾಚ್(ಕೈ-ಗಡಿಯಾರ)ಕಾರಣದಿಂದಾಗಿ ಮತ್ತೊಮ್ಮೆ ಇದೀಗ ಸುದ್ದಿಯಲ್ಲಿದ್ದಾರೆ.
ಇತ್ತೀಚಿಗೆ ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್(ISPL) ಪಂದ್ಯ ವೀಕ್ಷಣೆ ವೇಳೆ ಅಭಿಷೇಕ್ ಕಟ್ಟಿರುವ ವಾಚ್ ಗಮನಿಸಿದ ನೆಟ್ಟಿಗರು ಕೈ-ಗಡಿಯಾರದ ವಿಶೇಷತೆಯನ್ನು ಗುರುತಿಸಿದ್ದಾರೆ. ಅಲ್ಲದೆ, ಅದರ ಬೆಲೆ ಕೂಡ ಬಹಿರಂಗಪಡಿಸಿದ್ದಾರೆ.
ಗಡಿಯಾರದ ಕಲಾಕೃತಿಯೂ ರಾಮಜನ್ಮ ಭೂಮಿ ಅಯೋಧ್ಯೆ(Ayodhya) ದೇವಾಲಯದ ಪ್ರೇರಣೆ ಪಡೆದಿದೆ. ಅಭಿಷೇಕ್ರ ಅತ್ಯದ್ಭುತ ವಾಚ್ ಜಾಕೋಬ್ & ಕಂ ಬ್ರ್ಯಾಂಡ್ ಕಂಪನಿಯಾದಗಿದ್ದು, 'ಎಪಿಕ್ ಎಕ್ಸ್ ರಾಮ್ ಜನ್ಮಭೂಮಿ ಟೈಟಾನಿಯಂ ಆವೃತ್ತಿ 2' ಎಂದು ಹೆಸರಿಸಲಾಗಿದೆ. ಐಷಾರಾಮಿಯ ದೇವಾಲಯಗಳ ಪರಂಪರನಯನ್ನೆ ಕೆತ್ತಲಾಗಿದೆ. ಬಾಲರಾಮ ವಿಗ್ರಹದ ಜತೆ ದೇವಾಲಯದ ಮೇರು ಕೃತಿಯನ್ನು ವಾಚ್ನಲ್ಲಿ ಕೆತ್ತಲಾಗಿದೆ. ಅಲ್ಲದೆ, ಸಮಯದ 12 ಗಂಟೆಯನ್ನು ಒಳಗೊಂಡಿದ್ದು, 9ಕ್ಕೆ ದೇವಾಲಯ, 3ಕ್ಕೆ ಭಗವಾನ್ ಹನುಮಾನ್ ಮತ್ತು 6ಕ್ಕೆ ಜೈಶ್ರಿರಾಮ್ ಎಂದು ಬರೆಯಲಾಗಿದೆ.
ಅಭಿಷೇಕ್ ಕಟ್ಟಿರುವ ವಾಚ್ಗಳು ಜಗತ್ತಿನಲ್ಲಿ ಕೇಲವ 49 ಪೀಸ್ಗಳಿದ್ದು. ವರದಿಗಳ ಪ್ರಕಾರ ಈ ಐಷಾರಾಮಿ ಟೈಮ್‌ಪೀಸ್ ಒಂದಕ್ಕೆ ಬರೊಬ್ಬರಿ 34,00,000(34 ಲಕ್ಷ ರೂ.) ಮೌಲ್ಯ ಹೊಂದಿದೆ.(ಏಜೆನ್ಸೀಸ್)