

ಮುಂಬೈ: ಜ.16ರಂದು ಬಾಂದ್ರಾದಲ್ಲಿನ ಮನೆಯಲ್ಲಿ ಸೈಫ್ ಅಲಿಖಾನ್(Saif Ali Khan Couple) ಮೇಲೆ ಮಾರಣಾಂತಿಕ ದಾಳಿ(ಚಾಕು ಇರಿತ) ಬಳಿಕ ಭದ್ರತೆಯ ಹಿತದೃಷ್ಠಿಯಿಂದ ಮಕ್ಕಳಾದ ಜೆಹ್ ಮತ್ತು ತೈಮೂರ್ ಅವರ ಛಾಯಚಿತ್ರಗಳನ್ನು ತೆಗೆಯದಂತೆ (ಕ್ಲಿಕ್ ಮಾಡದಂತೆ) ಫೋಟೋಗ್ರಾಫ್ರ್ಸ್ ಬಳಿ ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೈಫ್ ಮತ್ತು ಪತ್ನಿ ಕರೀನಾ ಕಪೂರ್. ಮಕ್ಕಳ ಫೋಟೊ ಮಾತ್ರವಲ್ಲ, ನಮ್ಮ ಮನೆಯ ಸೇರಿದಂತೆ ಕುಟುಂಬಸ್ಥ ಫೋಟೊಗಳನ್ನು ಕ್ಲಿಕಿಸಬೇಡಿ. ಅಧಿಕ ಭದ್ರತೆ ಕಾಳಜಿ ಹಿನ್ನೆಲೆ ಮತ್ತೊಮ್ಮೆ ನಿಮಗೆ ನಮ್ಮ ಮನವಿ ಎಂದು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣದ ಬಳಿಕ ತಮಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆಯ ಅವಶ್ಯಕತೆ ಇದೆ. ಅಲ್ಲದೆ ತನಿಖೆ ಕೂಡ ಪ್ರಕ್ರಿಯೆಯಲ್ಲಿದೆ. ಹೀಗಾಗಿ, ಕುಟುಂಬದ ಹಿತದೃಷ್ಠಿಯಿಂದ ಇಂತಹ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ.
ಮುಂಬೈನ ಬಾಂದ್ರಾದಲ್ಲಿರುವ ಸೈಫ್ ಅಲಿ ಖಾನ್ ಅವರ ಮನೆಯಲ್ಲಿ ಜ.16ರಂದು ಮಧ್ಯರಾತ್ರಿಯಲ್ಲಿ ಸೈಫ್ ಅಲಿ ಮಗನ ಜೆನ್ನ ಕೋಣೆಗೆ ನುಗ್ಗಿದ ಕಳ್ಳ, ಮಗುವನ್ನು ಹಿಡಿದುಕೊಂಡು, 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಗನನ್ನು ಉಳಿಸಲು ಪ್ರಯತ್ನಿಸಿದಾಗ ಸೈಫ್ ಅಲಿ ಖಾನ್ಗೆ ಚಾಕುವಿನಿಂದ 6 ಬಾರಿ ಇರಿದು ಪರಾರಿಯಾಗಿದ್ದ. ಬಳಿಕ ಕುಟುಂಬಸ್ಥರು ಸೈಫ್ನನ್ನು ಕೂಡಲೇ ಹತ್ತಿರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಂಡರು.(ಏಜೆನ್ಸೀಸ್)