ದುಬಾರಿ ಕಾರು ಖರೀದಿಸಿದ ಅಭಿಷೇಕ್ ಅಂಬರೀಶ್ ! ಐಷಾರಾಮಿ ಸೌಲಭ್ಯವಿರುವ ಕಾರಿನ ಬೆಲೆ ಎಷ್ಟು ಗೊತ್ತಾ?

ambrish
Published on

ಬೆಂಗಳೂರು: ರೆಬೆಲ್‌ಸ್ಟಾರ್ ಅಂಬರೀಶ್‌ ಹಾಗೂ ಸುಮಲತಾ ಪುತ್ರ ಅಭಿಷೇಕ್ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿ ತನ್ನದೇ ಚಾಪು ಮೂಡಿಸಿದ್ದಾರೆ. ಯಂಗ್​ ರೆಬಲ್​ ಸ್ಟಾರ್​ ಎಂದೇ ಫೇಮಸ್ ಆಗಿರುವ ಅಭಿ ಅಪ್ಪನಂತೆ ಸ್ಯಾಂಡಲ್​ವುಡ್​ನಲ್ಲಿ ಮಿಂಚುತ್ತಿದ್ದಾರೆ.

ತಂದೆ ಅಂಬರೀಶ್ ಅವರಂತೆ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅಭಿಷೇಕ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಸ್ಯಾಂಡಲ್​ವುಡ್​ ನಟ ಅಭಿಷೇಕ್ ಅಂಬರೀಶ್ ಹೊಸ ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ.

ಹೌದು, ನಟ ಅಭಿಷೇಕ್ ಅಂಬರೀಶ್ ಅವರು ಹೊಸ ಬಿಎಂಡಬ್ಲ್ಯೂ ಎಕ್ಸ್​ x7 ಕಾರು ಖರೀದಿ ಮಾಡಿದ್ದಾರೆ. ಅವರು ಮನೆಯ ಸುತ್ತಮುತ್ತ ಡ್ರೈವ್ ಮಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಿಎಂಡಬ್ಲ್ಯೂ ಕಾರು 1 ಕೋಟಿ 30 ಲಕ್ಷಬೆಲೆಯುಳ್ಳದಾಗಿದೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net