ಗುಜರಾತ್​ ಗೃಹ ಸಚಿವರ ಕುರಿತು ಅವಹೇಳನ; ಎಎಪಿ ನಾಯಕ ಗೋಪಾಲ್​ ಇಟಾಲಿಯಾ ಬಂಧನ

Gopal italia
Published on

ಸೂರತ್​​​: ಕಳೆದ ವರ್ಷಾಂತ್ಯದಲ್ಲಿ ನಡೆದ ಗುಜರಾತ್​ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಗೃಹ ಸಚಿವ ಹರ್ಷ್​ ಸಾಂಘವಿ ಕುರಿತು ಅವಹೇಳನಕಾತಿ ಹೇಳಿಕೆ ನೀಡಿದ ಆರೋಪದ ಮೇಲೆ ಎಎಪಿ ನಾಯಕ ಗೋಪಾಲ್​ ಇಟಾಲಿಯಾ ಅವರನ್ನು ಪೊಲೀಸರು ಬಂಧಿಸಿದ್ಧಾರೆ.

ಬಂಧನದ ನಂತರ ಪೊಲೀಸರು ಗೋಪಾಲ್ ಅವರನ್ನು ಸೂರತ್​ ಕ್ರೈಂ ಬ್ರಾಂಚ್​ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ಧಾರೆ.

ಅವಹೇಳನಕಾರಿ ಹೇಳಿಕೆ

2022ರ ವರ್ಷಾಂತ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಎಎಪಿ ಗೋಪಾಲ್​ ಇಟಾಲಿಯ ಗೃಹ ಸಚಿವ ಹರ್ಷ್​ ಸಾಂಘವಿ ಅವರನ್ನು ಡ್ರಗ್ಸ್​ ಸಾಂಘವಿ ಎಂದು ಸಂಭೋದಿಸಿದ್ದರು.

ಈ ಕುರಿತು ಹರ್ಷ್​​ ಸಾಂಘವಿ ಸ್ಥಳೀಯ ಪೊಲೀಸ್​ ಠಾಣೆ ದೂರು ದಾಖಲಿಸಿ್ದರು ಮತತ್ಉ ಪೊಲೀಸರು FIR ಹಾಕಿದ್ದರು.

ಬಿಜೆಪಿಗೆ ಭಯ ಏಕೆ ?

ತಮ್ಮ ಪಕ್ಷದ ನಾಯಕನನ್ನು ಬಂಧಿಸಿರುವ ಕುರಿತು ಟ್ವೀಟ್​ ಮಾಡಿರುವ ಅರವಿಂದ್​ ಕೇಜ್ರಿವಾಲ್​ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಸಾಧನೆಯಿಂದಾಗಿ ಭಯಗೊಂಡ ಬಿಜೆಪಿ ಗೋಪಾಲ್​ ಇಟಾಲಿಯಾ ಅವರನ್ನು ಬಂಧಿಸಿದೆ ಎಂದು ಕಿಡಿಕಾರಿದ್ಧಾರೆ.

ಗುಜರಾತ್​ನಲ್ಲಿ ಆಮ್​ ಆದ್ಮಿ ಪಕ್ಷದ ಪ್ರದರ್ಶನದಿಂದಾಗಿ ಬಿಜೆಪಿ ಯಾವ ರೀತಿ ಭಯ ಪಡುತ್ತಿದೆ ಎಂದರೆ ಅದು ಈಗ ನಮ್ಮ ಪಕ್ಷದ ನಾಯಕನನ್ನು ಬಂಧಿಸಿದೆ. ಬಿಜೆಪಿಗೆ ಇರುವುದು ಒಂದೇ ಗುರಿ ಆಮ್​ ಆದ್ಮಿ ಪಕ್ಷವನ್ನು ಹೇಗೆ ಮುಗಿಸುವುದು ಎಂಬುದರ ಬಗ್ಗೆ. ಮುಂದಿನ ದಿನಗಳಲ್ಲಿ ಒಬ್ಬೊಬ್ಬರನ್ನಾಗಿ ಜೈಲಿಗೆ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.

ಎಎಪಿ ಮುಗಿಸಲು ಷಡ್ಯಂತ್ರ

ತಮ್ಮನ್ನು ಬಂಧಿಸಿದ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ್​ ಇಟಾಲಿಯ ಬಿಜೆಪಿ ಪವಿತ್ರವಾದ ಪಕ್ಷ. ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಫಲಿತಾಂಶ ನೋಡಿದ ಮೇಲೆ ಇವರಿಗೆ ಸಹಿಸಲು ಆಗುತ್ತಿಲ್ಲ. ಭ್ರಷ್ಟ ಬಿಜೆಪಿ ಪಕ್ಷವು ಆಮ್​ ಆದ್ಮಿ ಪಕ್ಷವನ್ನು ಮುಗಿಸಲು ಹೊರಟಿದೆ. ನಾವು ಇದಕ್ಕೆಲ್ಲಾ ಹೆದರುವವರಲ್ಲಾ ಹೋರಾಟದ ಮೂಲಕ ಉತ್ತರ ಕೊಡುತ್ತೇವೆ ಎಂದು ಟ್ವೀಟ್​ ಮಾಡಿ ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net