More

    ದೆಹಲಿ ಮೇಯರ್​-ಉಪಮೇಯರ್​​ ಚುನಾವಣೆ; ಅಭ್ಯರ್ಥಿಗಳನ್ನು ಘೋಷಿಸಿದ ಆಪ್​

    ನವದೆಹಲಿ: ಏಪ್ರಿಲ್​ 26ರಂದು ದೆಹಲಿ ಮುನ್ಸಿಪಾಲ್​ ಕೌನ್ಸಿಲ್​​(MCD)ನ ಮೇಯರ್​, ಉಪಮೇಯರ್​ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಆಮ್​ ಆದ್ಮಿ ಪಕ್ಷ ತನ್ನ ಹುರಿಯಾಳುಗಳನ್ನು ಘೋಷಿಸಿದೆ.

    ಹಾಲಿ ಮೇಯರ್​ ಶೆಲ್ಲಿ ಓಬೆರಾಯ್​ ಹಾಗೂ ಉಪಮೇಯರ್​ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಅಭ್ಯರ್ಥಿಗಳೆಂದು ಎಎಪಿ ನಾಯಕ ಸಂಜಯ್​ ಸಿಂಗ್ ಘೋಷಿಸಿದ್ಧಾರೆ.

    ಈ ಕುರಿತು ಮಾತನಾಡಿದ ಸಂಜಯ್​ ಸಿಂಗ್​ ನಾವು ಮೇಯರ್ ಹಾಗೂ ಉಪಮೇಯರ್​ ಚುನಾವಣೆಗೆ ಶೆಲ್ಲಿ ಒಬೆರಾಯ್​ ಹಾಗೂ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಭಾರಿ ಚುನಾವಣೆ ಸಮಯದಲ್ಲಿ ಬಿಜೆಪಿಯ ಗದ್ದಲದ ನಡುವೆ ನಮ್ಮ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಈ ಭಾರಿಯೂ ಕೂಡ ನಮ್ಮ ಅಭ್ಯರ್ಥಿಗಳು ಕೂಡ ಜಯಗಳಿಸಲಿದ್ಧಾರೆ ಎಂದು ತಿಳಿಸಿದ್ಧಾರೆ.

    Delhi mcd Fight

    ಇದನ್ನೂ ಓದಿ: ಕೇರಳದ ರೈಲಿಗೆ ಬೆಂಕಿ ಹಚ್ಚಿದ ಆರೋಪಿ ಝಾಕಿರ್ ನಾಯ್ಕ್ ಅನುಯಾಯಿ!

    ವಿವಿಧ ವರ್ಗಕ್ಕೆ ಮೀಸಲು

    ದೆಹಲಿ ಪಾಲಿಕೆಯ ಐದು ವರ್ಷಗಳ ಅವಧಿಯಲ್ಲಿ ಸರದಿ ಆಧಾರದ ಮೇಲೆ ಮೇಯರ್ ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ವರ್ಷ ಮಹಿಳೆಯರಿಗೆ, ಎರಡನೇ ವರ್ಷ ಓಪನ್​ ಕೆಟಗರಿ, ಮೂರನೇ ವರ್ಷ ಮೀಸಲು ವರ್ಗಕ್ಕೆ, ನಾಲ್ಕು ಮತ್ತು ಐದನೇ ವರ್ಷ ಓಪನ್​ ಕೆಟಗರಿಗೆ ಮೀಸಲಿಡಲಾಗಿದೆ.

    ಡಿಸಂಬರ್​ ನಾಲ್ಕರಂದು ನಡೆದ 250 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts