

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ನಿಮಿತ್ತ ಭಾನುವಾರ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ KMFನ ಡೈರಿ ಉತ್ಪನ್ನಗಳನ್ನು ಸವಿದು ನಂದಿನಿ ನಮ್ಮ ಕರ್ನಾಟಕದ ಹೆಮ್ಮೆ ಎಂದು ಟ್ವೀಟ್ ಮಾಡಿದ್ದರು.
ಇನ್ನು ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ನಾಯಕ ಅಣ್ಣಾಮಲೈ ಕಾಂಗ್ರೆಸ್ ನಾಯಕನ ಕಾಲೆಳೆದಿದ್ಧಾರೆ.
ರಾಹುಲ್ ಗಾಂಧಿ ಅವರು KMFನ ಉತ್ಪನ್ನಗಳನ್ನು ಬೆಸ್ಟ್ ಎಂದು ಭಾವಿಸಿರುವುದು ಸಂತಸ ತಂದಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.
ನಾನು ಈ ಮೂಲಕ ರಾಹುಲ್ ಗಾಂಧಿ ಅವರಲ್ಲಿ ಕೇಳಿಕೊಳ್ಳುವೇನೆಂದರೆ ಕೇರಳದಲ್ಲಿ ನಂದಿನಿ ಉತ್ಪನ್ನಗಳ ಸುಗಮ ಮಾರಾಟಕ್ಕಾಗಿ ಕೂಡಲೇ ರಾಹುಲ್ ಗಾಂಧಿ ಅವರು ಮಧ್ಯಪ್ರವೇಶಿಸಬೇಕು. ಇಲ್ಲದಿದ್ದರೆ ಇದು ಚುನಾವಣೆಯ ಸಮಯದಲ್ಲಿ ಮತ್ತೊಂದು ಗಿಮಿಕ್ ಆಗುತ್ತದೆ.
ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಾರಾಟವನ್ನು ರಾಹುಲ್ ಗಾಂಧಿ ಘೋಷಿಸಲಿದ್ಧಾರೆ ಎಂದು ನಾನು ಭಾವಿಸಿದ್ದೇನೆ ಎಂದು ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ಧಾರೆ.
ಇನ್ನು ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಅಣ್ಣಾಮಲೈ ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯಿಸಿ ಸರ್ ನಿಮ್ಮ ಪೂರ್ವಜರ ಹೆಸರನ್ನು ಸುತ್ತುವರೆದಿರುವ ಬ್ರ್ಯಾಂಡ್ಗಳಿಗಿಂತ ತಮಿಳುನಾಡಿನ ಅವಿನ್ ಹಾಗೂ ಕರ್ನಾಟಕ ನಂದಿನಿ ಅಂತರಾಷ್ಟ್ರೀಯ ಉತ್ಪನ್ನಗಳಾಗಿ ರೂಪಾಂತರಗೊಳ್ಳುತ್ತಿವೆ.
ಮೋದಿ ಅವರ ಆತ್ಮನಿರ್ಭರ ಭಾರತದಲ್ಲಿ ಈ ಉತ್ಪನ್ನಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು ದಯವಿಟ್ಟು ಇದನ್ನು ಒಂದು ಸ್ಥಳಕ್ಕೆ ಸೀಮಿತಗೊಳಿಸಬೇಡಿ ಎಂದು ರಾಹುಲ್ ಗಾಂಧಿ ಟ್ವೀಟ್ಗೆ ಪ್ರತಿಕ್ರಿಯಿಸಿದ್ಧಾರೆ.