ದೆಹಲಿಯಲ್ಲಿ ಮತ್ತೆ ಮುನ್ನಡೆ ಸಾಧಿಸಿದ ಆಮ್​ ಆದ್ಮಿ ಪಕ್ಷ! ಬಿಜೆಪಿ ಕ್ಷೇತ್ರದಲ್ಲೂ ಎಎಪಿಯೇ ಮುಂದು!

aap
Published on

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪುರಸಭೆಗಳಲ್ಲಿ ಮತ್ತೊಮ್ಮೆ ಆಮ್​ ಆದ್ಮಿ ಪಕ್ಷ ಮುನ್ನಡೆ ಸಾಧಿಸಿಕೊಂಡಿದೆ. ಪುರಸಭೆಯ ಐದು ವಾರ್ಡ್​ಗಳಲ್ಲಿ ನಾಲ್ಕು ವಾರ್ಡ್​ಗಳಲ್ಲಿ ಎಎಪಿ ಗೆಲುವಿನ ಹತ್ತಿರದಲ್ಲಿದ್ದರೆ ಒಂದರಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿಕೊಂಡಿದೆ.

ನವದೆಹಲಿ ಪುರಸಭೆಯ ಐದು ವಾರ್ಡ್​ಗಳಿಗೆ ಫೆಬ್ರವರಿ 28ರಂದು ಉಪಚುನಾವಣೆ ನಡೆದಿತ್ತು. ಅದರ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದೆ. ಅದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಮುನ್ನಡೆ ಸಾಧಿಸಿಕೊಂಡಿದೆ. ಶಾಲಿಮಾರ್ ಬಾಗ್ ನಾರ್ತ್​ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್​ ಇದ್ದು, ಒಂದು ವೇಳೆ ಅಲ್ಲಿ ಪಕ್ಷ ಸೋತರೆ ಪಕ್ಷಕ್ಕೆ ಮುಖಭಂಗವಾಗಲಿದೆ ಎನ್ನಲಾಗಿದೆ.

ಚೌಹಾಣ್ ಬಂಗಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿಕೊಂಡಿದೆ. ಫೆಬ್ರವರಿ ಅಂತ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಶೇ. 50ರಷ್ಟು ಮತದಾನವಾಗಿತ್ತು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net