

ಬೆಂಗಳೂರು: ಆಧಾರ್ ಕಾರ್ಡ್ ಇದು ಶ್ರೀಸಾಮಾನ್ಯನ ಅಧಿಕಾರ! ಭಾರತದಲ್ಲಿನ ಪ್ರತಿಯೊಬ್ಬ ವ್ಯಕ್ತಿಗು ಈ ವಿಶೇಷವಾದ 12 ಯುಐಡಿಎಐ ಸಂಖ್ಯೆಯನ್ನು ನೀಡಲಾಗಿರುತ್ತದೆ. ಆಧಾರ್ ನಮ್ಮ ದೈನಂದಿನ ಕೆಲಸ ಸೇರಿದಂತೆ ಹಲವಾರು ಬಹುಮುಖ್ಯ ದಾಖಲಾತಿಗಳಿಗೆ ಅಗತ್ಯ ಡಾಕ್ಯುಮೆಂಟ್ ಆಗಿದೆ. ಇದರಿಂದ ಸರ್ಕಾರಿ ಅರ್ಜಿಗಳು, ಪೋರ್ಟಲ್ ಸೇವೆಗಳು, ವಾಹನ ಪರವಾನಗಿಯನ್ನು ಸುಲಭವಾಗಿ ಪಡೆಯಬಹುದಾಗಿದೆ.
ಅತೀ ಮುಖ್ಯವಾಗಿ ಆಧಾರ್ ಕಾರ್ಡ್ನ ಸೇವೆಗಳು ಗ್ರಾಮೀಣ ಭಾಗದಲ್ಲಿನ ಜನಸಾಮಾನ್ಯರಿಗೆ ಹೆಚ್ಚು ಉಪಯೋಗವಾಗುತ್ತಿದೆ. ರೇಷನ್ ತೆಗೆದುಕೊಳ್ಳಲು, ಬ್ಯಾಂಕ್ನಿಂದ ಸಾಲ ಪಡೆಯಲು, ಸರ್ಕಾರದ ಹಲವು ಯೋಜನೆಗಳ ಸೌಲಭ್ಯ ಗಳಿಸಲು ಪಟ್ಟಣ ಪ್ರದೇಶಗಳಲ್ಲಿ ಬದುಕುತ್ತಿರುವ ಪ್ರತಿಯೊಬ್ಬರು ಈ ಆಧಾರ್ ಕಾರ್ಡ್ನ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಈ ಮಧ್ಯೆ ಇದೀಗ ಕೇಂದ್ರ ಸರ್ಕಾರ ದೇಶದ ಜನತೆಗೆ ಬಹುಮುಖ್ಯ ಮಾಹಿತಿಯೊಂದನ್ನು ನೀಡಿದ್ದು, ಪ್ರತಿಯೊಬ್ಬರು ತಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿಕೊಳ್ಳಲು ಹೊಸ ಗಡುವನ್ನು ಕೊಟ್ಟಿದೆ. ಇದನ್ನು ಹೇಗೆ ಮಾಡೋದು? ಮಾಹಿತಿಯನ್ನು ಸುಲಭವಾಗಿ ತಿಳಿಸಿಕೊಡುವ ಯಾವುದಾದರೂ ವಿಡಿಯೋ ಇದೆಯಾ? ಎಂಬ ಪ್ರಶ್ನೆಗೆ ವಿಜಯವಾಣಿ ತಂಡ ಸರಳವಾಗಿ ವಿವರಿಸಿರುವ ಉಪಯುಕ್ತ ಮಾಹಿತಿಯ ವಿಡಿಯೋ ಲಿಂಕ್ ಕೆಳಗಿದೆ, ಕ್ಲಿಕ್ ಮಾಡಿ ವೀಕ್ಷಿಸಿ.