ಪಿಎಫ್ ಜನ್ಮದಿನಾಂಕ ಸರಿಪಡಿಸಲು ಆಧಾರ್ ಸಾಕು

epfo
Published on

ನವದೆಹಲಿ: ಭವಿಷ್ಯ ನಿಧಿ ಚಂದಾದಾರರ ಜನ್ಮ ದಿನಾಂಕ ಸರಿಪಡಿಸಲು ಆಧಾರ್ ಕಾರ್ಡ್ ಅನ್ನು ಪುರಾವೆಯಾಗಿ ಆನ್​ಲೈನ್​ನಲ್ಲಿ ಅಂಗೀಕರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಒಪ್ಪಿದೆ.

ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಆನ್​ಲೈನ್ ಸೇವೆಗಳು ಚಂದಾದಾರರಿಗೆ ಸೂಕ್ತವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್​ಒ ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದೆ. ಜನ್ಮ ದಿನಾಂಕದಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸವಿರುವ ಪ್ರಕರಣಗಳಲ್ಲಿ ಮಾತ್ರ ಆಧಾರ್ ಒಪ್ಪಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಲಾಕ್​ಡೌನ್ ಕಾರಣದಿಂದಾಗಿ ಸಮಸ್ಯೆಯಲ್ಲಿರುವ ಕಾರ್ವಿುಕರು 3 ತಿಂಗಳ ಮೂಲವೇತನ ಹಾಗೂ ತುಟ್ಟಿಭತ್ಯೆಯಷ್ಟು ಹಣವನ್ನು ಹಿಂದಿರುಗಿಸಲಾಗದ ಮುಂಗಡವಾಗಿ ಪಡೆಯಲು ಇಪಿಎಫ್​ಒ ಅವಕಾಶ ಕಲ್ಪಿಸಿದೆ. ಕೆವೈಸಿ ಸರಿಯಿರುವ ಚಂದಾದರರಿಗೆ ಮಾತ್ರವೇ ಈ ಸೌಲಭ್ಯ ಲಭ್ಯ.

ಹೆಚ್ಚುವರಿ ಗಡುವು

ಜೀವ ವಿಮಾ ಪಾಲಿಸಿಗಳ ಕಂತು ಪಾವತಿಸಲು ಹೆಚ್ಚುವರಿ 30 ದಿನಗಳ ಅವಧಿ ನೀಡಲಾಗಿದೆ. ಈಗಾಗಲೇ ಏಪ್ರಿಲ್ 21ರವರೆಗೆ 30 ದಿನಗಳ ವಿನಾಯಿತಿ ಅವಧಿ ಇದ್ದು, ಇದರ ಜತೆಗೆ ಹೆಚ್ಚುವರಿ ಗಡುವು ಸೇರೊ ಮೇ.31ರವರೆಗೆ ಪಾವತಿಗೆ ಅವಕಾಶ ಇದೆ ಎಂದು ಐಆರ್​ಡಿಎಐ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net