ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಲ್ಲಿ 24 ಸೆಕ್ಯೂರಿಟಿ ಗಾರ್ಡ್​ ಹುದ್ದೆಗೆ ಅರ್ಜಿ ಆಹ್ವಾನ

indian Overseas Bank
Published on

ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್​ ಆಗಿರುವ ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ ಚೆನ್ನೈನಲ್ಲಿರುವ ಕಂಟ್ರೋಲ್​ ಆಫೀಸ್​ನಲ್ಲಿ 24 ಸೆಕ್ಯೂರಿಟಿ ಗಾರ್ಡ್​ ಹುದ್ದೆಗಳ ಭತಿರ್ಗೆ ಮಾಜಿ ಸೈನಿಕ ಅಭ್ಯಥಿರ್ಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

24 ಹುದ್ದೆಗಳ ಪೈಕಿ ಎಸ್​ಸಿ-4, ಎಸ್​ಟಿ-1, ಒಬಿಸಿ-6, ಇಡಬ್ಲ್ಯುಎಸ್​-2, ಸಾಮಾನ್ಯ-11 ಹುದ್ದೆಗಳಿವೆ. ಅಭ್ಯಥಿರ್ಗಳು 10ನೇ ತರಗತಿ / ತತ್ಸಮಾನ ಪಾಸಾಗಿರಬೇಕು. ಪ್ರಾದೇಶಿಕ ಭಾಷಾ ಜ್ಞಾನ ಹೊಂದಿರಬೇಕು. ಸೇನಾ ಪಡೆ ತೊರೆಯುವವರೆಗೂ ಆದರ್ಶಪ್ರಾಯ ನಡತೆ ಹೊಂದಿರಬೇಕು. ನಿಗದಿತ ವೈದ್ಯಕಿಯ ಅರ್ಹತೆಯನ್ನು ಹೊಂದಿರಬೇಕು.

ಚೆನ್ನೈ ನಿವಾಸಿಯಾಗಿರುವ ಮಾಜಿ ಸೈನಿಕ ಅಭ್ಯಥಿರ್ಗಳು ಅರ್ಜಿ ಸಲ್ಲಿಸಬಹುದು. ಅಭ್ಯಥಿರ್ಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಸ್ತುನಿಷ್ಠ ಮಾದರಿ ಆನ್​ಲೈನ್​ ಪರೀಕ್ಷೆ ಹಾಗೂ ದೈಹಿಕ ಅರ್ಹತಾ ಪರೀಕ್ಷೆ ಇರುತ್ತದೆ, ಆಯ್ಕೆಯಾದ ಅಭ್ಯಥಿರ್ಗಳಿಗೆ ಮಾಸಿಕ 9560 ರೂ. ದಿಂದ 18545 ರೂ. ಮಾಸಿಕ ವೇತನ ಇರುತ್ತದೆ.

ಆನ್​ಲೈನ್​ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾಜ್ಞಾನ (ತಮಿಳು), ಇಂಗ್ಲಿಷ್​ ಭಾಷಾ ಜ್ಞಾನ, ಅಪ್ಟಿಟ್ಯುಡ್​ , ಅಂಕಗಣಿತ ಪರೀಕ್ಷೆ, ಸೈಕೋಮೆಟ್ರಿಕ್​ ಪರೀಕ್ಷೆ ಇರುತ್ತವೆ. ಅಭ್ಯಥಿರ್ಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು. ಅರ್ಹ ಮತ್ತು ಆಸಕ್ತ ಅಭ್ಯಥಿರ್ಗಳು ಏಪ್ರಿಲ್​ 10 ರೊಳಗೆ ಆನ್​ಲೈನ್​ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ https://bit.ly/2V0kwTG

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net