ಪೊಲೀಸ್​ ಇನ್​ಸ್ಪೆಕ್ಟರ್​ ಕರೆಯುತ್ತಿದ್ದಾರೆ ಬಾ ಎಂದು ಯುವತಿಯನ್ನ ಕರೆದೊಯ್ದವನಿಂದ ಮಾರ್ಗಮಧ್ಯೆ ಅತ್ಯಾಚಾರ!

rape
Published on

ಆಂಧ್ರಪ್ರದೇಶ: ಪೊಲೀಸ್​ ಇನ್​ಸ್ಪೆಕ್ಟರ್​ ಕರೆಯುತ್ತಿದ್ದಾರೆ ಬಾ ಎಂದು ಯುವತಿಯನ್ನ ಕರೆದೊಯ್ದ ಯುವಕ ಮಾರ್ಗಮಧ್ಯೆ ಆಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ!

ಇಂತಹ ಘಟನೆ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಒಂಗೋಲು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಹೊರಗಡೆ ಸುತ್ತಾಡಲು ತೆರಳಿದ್ದಳು. ಈ ವಿಚಾರ ತಿಳಿದ ಯುವಕನೊಬ್ಬ ಆಕೆ ಬಳಿ ಬಂದು, 'ನಿನ್ನ ಖಾಸಗಿ ದೃಶ್ಯಗಳು ನನ್ನ ಬಳಿ ಇದೆ. ನಿನ್ನ ಕುಟುಂಬಕ್ಕೆ ತೋರಿಸುತ್ತೇನೆ' ಎಂದು ಹೇಳಿದ್ದಾನೆ. ಆದರೂ ಆಕೆ ಹೆದರಿಲ್ಲ. ಅದೆಲ್ಲ ಸುಳ್ಳು ಎಂದು ವಾದಿಸುತ್ತಿದ್ದಂತೆ ಮಾತು ಬದಲಿಸಿದ ಆತ, ಎಸ್​ಐ ಕರೆಯುತ್ತಿದ್ದಾರೆ. ಪೊಲೀಸ್​ ಠಾಣೆಗೆ ಬರಬೇಕಂತೆ ಬಾ ಎಂದು ಹೇಳಿದ್ದಾನೆ.

ಯುವಕನ ಮಾತು ನಂಬಿ ಪೊಲೀಸ್​ ಠಾಣೆಗೆ ಹೊರಟ ಯುವತಿಯನ್ನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯುವತಿಯನ್ನು ಮನೆ ಬಳಿ ಬಿಟ್ಟಿದ್ದು, ಸಂತ್ರಸ್ತೆ ನಡೆದ ಘಟನೆಯನ್ನ ಗೆಳತಿಯರೊಂದಿಗೆ ಹೇಳಿಕೊಂಡಿದ್ದು, ಬಳಿಕ ದಿಶಾ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net