ಪ್ಲೀಸ್​ ಒಂದು ಫೋಟೋ ತೆಗಿತೀರಾ... ಈತ ಮಾಡಿದ್ದೇನು ಗೊತ್ತಾ? ಹುಷಾರ್​ ಇಂಥವರು ಇರ್ತಾರೆ! Young woman

Young woman
Published on

Young woman : ಯುವತಿಯ ಫೋಟೋವನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಕ್ಕಾಗಿ ಯುವಕನೊಬ್ಬನನ್ನು ಬಂಧಿಸಲಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯ ಕಡಕ್ಕಲ್‌ನಲ್ಲಿ ಈ ಘಟನೆ ನಡೆದಿದೆ.

ಬಂಧಿತ ಆರೋಪಿಯನ್ನು ಅಜಾಜ್​ ಎಂದು ಗುರುತಿಸಲಾಗಿದೆ. ಈತ ಮೈನಾಗಪ್ಪಳ್ಳಿ ನಿವಾಸಿ. ನಿಶ್ಚಿತಾರ್ಥಕ್ಕೆ ಬಟ್ಟೆ ಖರೀದಿಸಲು ಬಂದಿದ್ದ 20 ವರ್ಷದ ಯುವತಿಯ ಫೋಟೋ ತೆಗೆದು ಹಣ ಸುಲಿಗೆ ಮಾಡಲು ಯತ್ನಿಸಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ. ಮಾರ್ಫ್ ಮಾಡಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡದಿರಲು ಅಜಾಜ್​, 1 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ.

ಸಂತ್ರಸ್ತ ಯುವತಿ ಕಳೆದ ವರ್ಷ ಜುಲೈನಲ್ಲಿ ತನ್ನ ನಿಶ್ಚಿತಾರ್ಥಕ್ಕಾಗಿ ಉಡುಗೆ ಖರೀದಿಸಲು ಬಂದಿದ್ದಳು. ಈ ವೇಳೆ ಒಂದು ಉಡುಪನ್ನು ಧರಿಸಿ, ಅಂಗಡಿಯ ಉದ್ಯೋಗಿ ಅಜಾಜ್ ಬಳಿ ತನ್ನ ಚಿತ್ರ ತೆಗೆಯಲು ಕೇಳಿಕೊಂಡಳು. ಈ ವೇಳೆ ಅಜಾಜ್ ತನ್ನ ಸ್ವಂತ ಫೋನ್‌ನಲ್ಲಿ ಚಿತ್ರವನ್ನು ತೆಗೆದುಕೊಂಡು ನಂತರ ಅದನ್ನು ಮಾರ್ಫಿಂಗ್ ಮಾಡಿ ಆಕೆಗೆ ತೋರಿಸಿ ಬೆದರಿಕೆ ಹಾಕಿದ್ದಾನೆ.

ಇದಿಷ್ಟೇ ಅಲ್ಲದೆ, ಹುಡುಗಿಯ ತಾಯಿಗೆ ಕರೆ ಮಾಡಿ, ಹಣ ನೀಡದಿದ್ದರೆ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿದ್ದ. ಕೂಡಲೇ ಯುವತಿ ಕಡಕ್ಕಲ್ ಪೊಲೀಸರಿಗೆ ದೂರು ನೀಡಿದಳು. ಈ ವಿಚಾರ ತಿಳಿದು ಪರಾರಿಯಾಗಿದ್ದ ಆರೋಪಿ ಅಜಾಜ್​ನನ್ನು ತಮಿಳುನಾಡಿನ ರಾಮನಾಥಪುರಂನಿಂದ ಬಂಧಿಸಲಾಗಿದೆ.

ಈ ಘಟನೆ ಪೊಲೀಸ್ ಪ್ರಕರಣವಾದಾಗಿನಿಂದ ಅಜಾಜ್​ ಫೋನ್ ಬಳಸುತ್ತಿರಲಿಲ್ಲ. ಆದರೆ, ಅಜಾಜ್ ತನ್ನ ಹಳೆಯ ಸಿಮ್ ಕಾರ್ಡ್ ತೆಗೆದು ಫೋನ್‌ಗೆ ಹೊಸ ಸಿಮ್ ಕಾರ್ಡ್ ಹಾಕಿದ್ದ. ಫೋನ್‌ನ IMEI ಸಂಖ್ಯೆಯನ್ನು ಪರಿಶೀಲಿಸಿದ ನಂತರ ಆತನನ್ನು ಸೈಬರ್ ಸೆಲ್ ಬಂಧಿಸಿತು. ಬಳಿಕ ಕಡಕ್ಕಲ್ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಸದ್ಯ ಅಜಾಜ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮಾಡಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net