ಎಂಗೇಜ್ಮೆಂಟ್ ಉಂಗುರ ಕಳೆದು ಹೋಗಿದ್ದಕ್ಕೆ ಪ್ರಾಣ ಬಿಟ್ಟ ತುಮಕೂರು ಯುವಕ

ring
Published on

ತುಮಕೂರು: ಮದುವೆ ನಿಶ್ಚಿತಾರ್ಥದ ವೇಳೆ ಹುಡುಗಿ ಕೈಬೆರಳಿಗೆ ಹಾಕಿದ್ದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದುರ್ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ.

ಕಮಲೇಶ್ (36) ಮೃತ ದುರ್ದೈವಿ.ಕಳೆದ ಮೂರು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಗ ತನ್ನನ್ನು ಮದುವೆಯಾಗುವ ಹುಡುಗಿ ಕೈಬೆರಳಿಗೆ ಹಾಕಿದ್ದ ಉಂಗುರ ಕಳೆದು ಹೋಗಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ನಡೆದಿದ್ದೇನು?: ಕಳೆದ ಮೂರು ತಿಂಗಳ ಹಿಂದೆ ವಿವಾಹ ನಿಶ್ಚಯವಾಗಿತ್ತು. ಬೆಂಗಳೂರು ಮೂಲದ ಯುವತಿಯೊಂದಿಗೆ ವಿವಾಹ ನಿಶ್ಚಿಯವಾಗಿತ್ತು. ಸ್ನಾನ ಮಾಡುವ ಸಂದರ್ಭದಲ್ಲಿ ಉಂಗುರ ಕಳೆದು ಹೋಗಿದೆ. ಈ ವಿಚಾರ ಮನೆಯವರಿಗೆ ಹೇಳಲು ಹೆದರಿ, ವಿಷ ಸೇವನೆ ಮಾಡಿದ್ದಾನೆ.

ನ. 17ರಂದು ವಿಷ ಸೇವನೆ ಮಾಡಿದ್ದು, ಆತನನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net