More

  298 ಕೆಜಿ. ದೇಹ ಹೊತ್ತು ನಡೆಯಲು ಕಷ್ಟ ಪಡ್ತಿದ್ದವಳು ಇಂದು ಮಾಡೆಲ್​​ಗಳೇ ನಾಚುವಂತೆ ಬದಲಾದ್ಲು! 

  ನವದೆಹಲಿ: ಒಂದು ಕಾಲದಲ್ಲಿ ನಡೆದಾಡುವುದಕ್ಕೂ ಕಷ್ಟ ಪಡುತ್ತಿದ್ದ ಅಂಬೆರ್ ರಚ್ಡಿ ಎನ್ನುವ ಯುವತಿ ಇಂದು ಸೂಪರ್​ ಮಾಡೇಲ್​​ಗಳನ್ನು ನಾಚಿಸುವಂತೆ ಬದಲಾಗಿದ್ದಾರೆ. ನಂಬಲು ಅಸಾಧ್ಯ ಅಲ್ವಾ? ಆದರೆ ಇದು ಖಂಡಿತಾ ಸತ್ಯ.. ಅಂತಹ ಒಂದು ನೈಜ ಕಥೆಯನ್ನು ಹೇಳುತ್ತಿದ್ದೇವೆ.

  ಐದು ವರ್ಷದವಳಿರುವಾಗಲೇ ಅಂಬೆರ್ ರಚ್ಡಿ ಬರೋಬ್ಬರಿ 68 ಕೆಜೆ ತೂಗುತ್ತಿದ್ದಳು. ಆಕೆಗೆ 23 ವರ್ಷ ಆಗುತ್ತಿದ್ದಾಗಲೇ 5 ಅಡಿ ಎತ್ತರಕ್ಕೆ  298 ಕೆಜಿ. ಎದ್ದು ನಿಲ್ಲಲು ಕಷ್ಟವಾಗುತ್ತಿದ್ದರಿಂದ ಆಕೆಗೆ ನಾನು ಎಲ್ಲರಂತೆ ಜೀವನ ಮಾಡುತಿಲ್ಲ ಎನ್ನುವ ಬೇಸರ ಇತ್ತು. ಈಕೆಯ ತೂಕದ ಏರಿಕೆ ಹೀಗೆಯೇ ಮುಂದುವರೆದರೆ 30ರೊಳಗೆ ಆಕೆ ಸಾಯುತ್ತಾಳೆ ಎಂದು ವೈದ್ಯರು ಹೇಳಿದ್ದರು.

  ತಾನು ಬದಲಾಗಬೇಕೆಂದು ಬಯಸಿ  ಕಠಿಣ ಪರಿಶ್ರಮ ಆಕೆ ನಿಯತ್ತಿನಿಂದ ಡಯಟ್, ಹಾಗೂ ವರ್ಕೋಟ್​​ ಫಾಲೋ ಮಾಡಿದಳು. ಈ ಪರಿಣಾಮ ತೂಕ ಇಳಿಕೆಯೇನೋ ಆಯ್ತು. ಆದರೆ ತೂಕದಿಂದ ಹೆಚ್ಚಾದ ಚರ್ಮ ಜೋತು ಬೀಳಲು ಶುರುವಾಯ್ತು ಇದಕ್ಕಾಗಿ ಆಕೆ ಸರ್ಜರಿಯ ಮೊರೆ ಹೋಗಬೇಕಾಯ್ತು.ಆದರೆ ತೂಕ ಇಳಿಕೆಯ ನಂತರ ಈಕೆ ಈಗ ಸೂಪರ್ ಮಾಡೆಲ್ ರೀತಿ ಕಾಣಿಸುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾಳೆ.

  ತೂಕ ಇಳಿಕೆಯ ನಂತರ ಆಕೆ ಟಿಎಲ್‌ಸಿಯ ರಿಯಾಲಿಟಿ ಟಿವಿ ಶೋ ಮೈ 600 ಎಲ್‌ಬಿ ಲೈಪ್‌ ದಲ್ಲಿ ಭಾಗವಹಿಸಿ ತಮ್ಮ ತೂಕ ಇಳಿಕೆಯ ಹಾದಿಯ ಬಗ್ಗೆ ಮಾತನಾಡಿದ್ದರು. ಆದರೆ ಈಕೆ ಈಗ ಎಷ್ಟು ತೂಕ ಹೊಂದಿದ್ದಾಳೆ ಎನ್ನುವುದಕ್ಕೆ ಖಚಿತ ಮಾಹಿತಿ ಇಲ್ಲ. ಈಕೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೂರು ಲಕ್ಷಕ್ಕೂ ಅಧಿಕ ಫಾಲೋವರ್‌ಗಳಿದ್ದಾರೆ. ದಿಟ್ಟ ನಿರ್ಧಾರ ಒಂದಿದ್ದರೆ ಯಾವುದೇ ಹಾದಿ ಕಷ್ಟವಾಗಿಲ್ಲ ಎಂದು ಯುವತಿ ಸಾಭೀತು ಮಾಡಿದ್ದಾಳೆ.

  ಸಿನಿಮಾದಿಂದ ಸ್ಫೂರ್ತಿ ಪಡೆದು ಶಾಲೆಯನ್ನು ದತ್ತು ಪಡೆದ ಬಾಲಕ; ಅದ್ಯಾವ್​ ಚಿತ್ರ ಗೊತ್ತಾ?

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts