ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ!; ಚೌಕಶಿ ಮಾಡಿ ಲಕ್ಷಾಂತರ ರೂ.ಗೆ ಪತಿಯನ್ನು ಖರೀದಿಸಿದ ಹೆಂಡ್ತಿ!? | Bargained

dk - 2025-07-06T191557.943
Published on

Bargained: ನನ್ನ ಗಂಡನನ್ನು ಚೌಕಶಿ ಮಾಡಿ ಲಕ್ಷಾಂತರ ರೂ. ಖರ್ಚು ಮಾಡಿ ಖರೀಸಿದ್ದೇನೆ ಎಂದು ಹೆಂಡತಿ ಹೇಳುತ್ತಿದ್ದಾಳೆ ಎನ್ನುವ ಅಪರೂಪದ ಹಾಗೂ ಕುತೂಹಲಕಾರಿ ಘಟನೆ ದೇಶದ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಹೌದು, ಇಬ್ಬರು ಮಡದಿಯ ಪ್ರೀತಿಯ ಗಂಡ ಎನಿಸಿಕೊಂಡಿರುವ ಈತನಿಗೆ ಮೊದಲ ಪತ್ನಿ, ಎರಡನೇ ಪತ್ನಿಗೆ 3 ಲಕ್ಷ ರೂ. ಕೊಟ್ಟು ಖರೀದಿ ಮಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಅಲ್ಲದೆ, ಇದು ಅಲ್ಲಿನ ಜಿಲ್ಲೆಯಲ್ಲಿ ಭಾರೀ ಸದ್ದು ಮಾಡಿದೆ.

ಘಟನೆ ಏನು..?

ಸ್ಥಳೀಯ ಮೂಲಗಳ ಪ್ರಕಾರ, ಕರ್ಲಿಹರ್ತ್​ ಪ್ರದೇಶದ ವ್ಯಕ್ತಿಯೊಬ್ಬ ವಿವಾಹಿತನಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದೀಗ ಈತ ಪಕ್ಕದೂರಿನ ಮೈನಾಗೂರು ಗ್ರಾಮದ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಬೆಳಸಿಕೊಂಡಿದ್ದಾನೆ. ಆರು ತಿಂಗಳಿಂದೆ ಈಕೆಯನ್ನು ತನ್ನ ಮೊದಲ ಹೆಂಡತಿಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಅಲ್ಲದೆ, ಮದುವೆಯಾಗಿ ಮನೆಗೆ ಕರೆದುಕೊಂಡು ಬರುವುದಾಗಿ ಹೇಳಿದ್ದಾನೆ. ಆದರೆ, ಮೊದಲ ಪತಿ ಬೇಡ ಎಂದಿದ್ದಾಳೆ. ಅಲ್ಲಿಂದ ಇಲ್ಲಿಯವರೆಗೆ ಈ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಹಾಗಾಗ ಜಗಳ ನಡೆಯುತ್ತಿದೆ.

ಇದೀಗ ಆಕೆ ಪತಿ ಕಳೆದ ಒಂದು ವಾರದಿಂದ ಕಾಣ್ಮರೆಯಾಗಿದ್ದಾನೆ ಎಂದು ಮೊದಲ ಪತ್ನಿ, ಎರಡನೇ ಪತ್ನಿ ಮೇಲೆ ದಾಳಿ ಮಾಡಿದ್ದಾಳೆ. ಇಬ್ಬರ ನಡುವೆ ಭಾರೀ ಜಗಳವಾಗಿದೆ. ಕೊನೆಗೂ ಈ ವಿಚಾರ ಪರಿಹರಿಸುವಂತೆ ಪಂಚಾಯತಿ ಕಟ್ಟೆಗೆ ಹೋಗಿದೆ.

ಇನ್ನು ಮೊದಲ ಪತ್ನಿ ನನ್ನ ಗಂಡನನ್ನು ಬಿಟ್ಟು ದೂರ ಹೋದರೆ 3 ಲಕ್ಷ ರೂ. ಕೊಡುವುದಾಗಿ ಎರಡನೇ ಪತ್ನಿಗೆ ಹೇಳಿದ್ದಾಳೆ. ವಿವಾದದ ಕೇಂದ್ರ ಬಿಂದುವಾಗಿರುವ ಎರಡನೇ ಪತ್ನಿ ಮಾತನಾಡಿ, '' ನನ್ನ ಮೊದಲ ಪತಿ ನನ್ನ ಬಿಟ್ಟು ಅನೇಕ ವರ್ಷಗಳಾಗಿವೆ. ಅವನು ಈಗ ಹಿಂತಿರುವುಗುವುದಿಲ್ಲ. ಕನಿಷ್ಠ 5 ಲಕ್ಷ ರೂ.ಗಳಾದರೂ ನೀಡಿ, 3 ಲಕ್ಷ ರೂ ಯಾವುದಕ್ಕೂ ಸಾಲಲ್ಲ ಎಂದು ಪಂಚಾಯಿತಿಯಲ್ಲಿ ಹೇಳಿದ್ದಾರೆ. ಕೊನೆಗೂ ಮೂರೂವರೆ ಲಕ್ಷ ರೂ. ಕೂಡುವುದಾಗಿ ಹೇಳಿ ಒಪ್ಪಂದ ಮಾಡಿಕೊಳ್ಳಾಯಿತು ಎಂದು ವರದಿ ಉಲ್ಲೇಖಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net