ಸಕ್ಕರೆನಾಡಲ್ಲಿ ಕಲ್ಲಿನಿಂದ ಜಜ್ಜಿ ಮಹಿಳೆಯ ಬರ್ಬರ ಹತ್ಯೆ!

mandya crime
Published on

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮಹಿಳೆಯ ಬರ್ಬರ ಹತ್ಯೆ ಮಾಡಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ಈ ಘಟನೆ.

ಗಂಗಾ(38) ಕೊಲೆಯಾದ ದುರ್ದೈವಿ. ಈಕೆ ತಮಿಳುನಾಡು ಮೂಲದ ನಿವಾಸಿಯಾಗಿದ್ದಳು. ಮಹಿಳೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಬರ್ಬರ ಕೃತ್ಯ ಮಾಡಲಾಗಿದೆ.

ನಿಮಿಷಾಂಭ ದೇವಾಲಯ ಬಳಿಯ ಕಾವೇರಿ ನದಿಯಲ್ಲಿ ಕಾಸು ಹೆಕ್ಕುವ ಕಾಯಕ ಮಾಡುತ್ತಿದ್ದಳು. ಸ್ಥಳದಲ್ಲಿ ಕೊಲೆಯಾದ ಮಹಿಳೆ ಸಂಬಂಧಕರ ಆಕ್ರಂದನ ಮುಗಿಲು ಮುಟ್ಟಿದೆ.

ಕೊಲೆಯಾದ ಮಹಿಳೆಯ ಗುಂಪಿನ‌ ಸದಸ್ಯರು ಎಲ್ಲರು ನಿರಾಶ್ರಿತರು. ಮೈಸೂರು- ಬೆಂಗಳೂರು ಮೇಲ್ಸೇತುವೆ ಕೆಳಗೆ ತಮ್ಮ ಗುಂಪಿನ ಜೊತೆ ವಾಸ ಮಾಡುತ್ತಿದ್ದ ಮೃತ ಮಹಿಳೆ. ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net