More

    ಒಂದು ಕುರ್ಚಿ, ಇಬ್ಬರ ಕಣ್ಣು; ಪೂರ್ಣಾವಧಿ ಸಿಎಂ ಸ್ಥಾನಕ್ಕೆ ಗುರಿ ಇಟ್ಟ ಡಿಕೆಶಿ

    ಬೆಂಗಳೂರು: AICC ಜನರಲ್ ಸೆಕ್ರೆಟರಿ ವೇಣುಗೋಪಾಲ್ ಜೊತೆ ಡಿಕೆಶಿ ಶಾಂಘ್ರೀಲಾ ಹೋಟೆಲ್​ನಲ್ಲಿ ಸಿಎಂ ಆಯ್ಕೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ಮುಗಿಸಿ ಡಿಕೆ ಶಿವಕುಮಾರ್ ದೆಹಲಿಗೆ 1 ಗಂಟೆಗೆ ಹೊರಡಲಿದ್ದಾರೆ.

    ಶಾಂಗ್ರೀಲಾ ಹೋಟೆಲ್​ನಲ್ಲಿ AICC ವೀಕ್ಷಕರ ಜೊತೆ ಡಿಕೆಶಿ ಚರ್ಚೆ ನಡೆಸುತ್ತಿದ್ದು ನಿನ್ನೆ ನಡೆದ ಶಾಸಕರ ಅಭಿಪ್ರಾಯ ಸಂಗ್ರಹದ ಬಗ್ಗೆ‌ ಕೂಡ ಮಾತುಕತೆ ನಡೆಸಿದ್ದಾರೆ. ಈ ನಡುವೆ ಶಾಂಗ್ರೀಲಾ ಹೋಟೆಲ್​ನಲ್ಲೇ ಹಲವು ಶಾಸಕರು ವಾಸ್ತವ್ಯ ಹೂಡಿದ್ದು ಈ ಹಿನ್ನೆಲೆಯಲ್ಲಿ ಡಿಕೆಶಿ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.

    ಮಧ್ಯಾಹ್ನ ಡಿಕೆಶಿ, ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿರುವ ಕಾರಣ AICC ವೀಕ್ಷಕರು ಹಾಗೂ ಡಿಕೆಶಿ ನಡುವಿನ ಚರ್ಚೆ ಮಹತ್ವ ಪಡೆದಿದೆ. ಇನ್ನು ಸಿಎಂ ಸ್ಥಾನಕ್ಕಾಗಿ ಪಟ್ಟು ಹಿಡಿದಿರುವ ಡಿಕೆಶಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಜತೆಗೂ ಮಾತುಕತೆ ನಡೆಸಿದ್ದಾರೆ.

    ಈ ಸಂದರ್ಭ ಅವರು “ನನಗೆ ಪೂರ್ಣಾವಧಿ ಸಿಎಂ ಸ್ಥಾನ ನೀಡಿ” ಎಂದು ಒತ್ತಾಯಿಸಿದ್ದು “ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ರು. ನನಗೆ ಆರಂಭದಲ್ಲಿ ಮಂತ್ರಿ ಸ್ಥಾನವೂ ಸಿಕ್ಕಿರಲಿಲ್ಲ ಆದರೆ ನಾನು ಅವರಿಗೆ ಸಹಕಾರ ನೀಡಿದ್ದೆ. ಈ ಬಾರಿ ಅವರು ನನಗೆ ಸಹಕಾರ ನೀಡಲಿ.. ಹಳೇ ಮೈಸೂರು ಭಾಗ ಸೇರಿದಂತೆ ಹಲವೆಡೆ ಒಕ್ಕಲಿಗ ಸಮುದಾಯ ನಮ್ಮ ಪರವಾಗಿ ನಿಂತಿದೆ. ನಾನು ಸಿಎಂ ಆಗಬಹುದೆಂಬ ಕಾರಣಕ್ಕೆ ನನ್ನ ಜತೆ ನಿಂತಿದೆ. ಅದನ್ನ ಉಳಿಸಿಕೊಳ್ಳಬೇಕಾದ್ರೆ ನನಗೆ ಸಿಎಂ ಸ್ಥಾನ ನೀಡಲೇ ಬೇಕು. ಮುಂದಿನ ಲೋಕಸಭೆ ಚುನಾವಣೆಗೂ ಇದು ಸಹಕಾರಿಯಾಗಲಿದೆ. ಹೀಗಾಗಿ ನನಗೆ ಸಿಎಂ ನೀಡಬೇಕು. ಈ ಬಗ್ಗೆ ಹೈಕಮಾಂಡ್​ನಲ್ಲಿ ನೀವು ನನ್ನ ಪರ ನಿಲ್ಲಬೇಕು” ಎಂದು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts