ಗಂಡನ ಮೊಬೈಲ್​ ಚೆಕ್​ ಮಾಡಿ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ 1 ಲಕ್ಷ ರೂಪಾಯಿ ದಂಡ!

mobile
Published on

ದುಬೈ: ಇಲ್ಲೊಬ್ಬ ಮಹಿಳೆ ಗಂಡನ ವಿರುದ್ಧವೇ ಗೂಢಚರ್ಯೆ ಮಾಡುತ್ತಾ ಆತನ ಮೊಬೈಲ್​ ಅನ್ನು ಕದ್ದು-ಮುಚ್ಚಿ ನೋಡಿ ಅದರಲ್ಲಿದ್ದ ಖಾಸಗಿ ವಿಚಾರಗಳನ್ನ ಬಹಿರಂಗ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾಳೆ.

ಈ ಘಟನೆ ದುಬೈನ ರಾಸ್​ ಅಲ್​ ಖೈಮಾದಲ್ಲಿ ನಡೆದಿದ್ದು, ಗಂಡನ ಮೊಬೈಲ್​ ಚೆಕ್​ ಮಾಡಿ ಆತನ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ ಅಲ್ಲಿನ ಸಿವಿಲ್​ ಕೋರ್ಟ್​ 5,400 ದಿರಾಮ್​ (ಭಾರತದ ರೂಪಾಯಿ ಲೆಕ್ಕದಲ್ಲಿ 1 ಲಕ್ಷ ರೂಪಾಯಿ) ದಂಡ ವಿಧಿಸಿ ಆದೇಶಿಸಿದೆ.

ಸಂಸಾರದಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟರೆ ಏನೇಲ್ಲ ಆಗಬಹುದು ಎಂಬುದಕ್ಕೆ ಈ ಪ್ರಕರಣ ತಾಜಾ ಉದಾಹರಣೆ. ನನ್ನ ಮೇಲೆ ಅನುಮಾನವಿದ್ದ ಪತ್ನಿ, ನನ್ನ ಮರ್ಯಾದೆ ಕಳೆಯಲೆಂದು ಮೊಬೈಲ್​ ಚೆಕ್​ ಮಾಡಿ ಕೆಲವು ಫೋಟೋ ಮತ್ತು ಆಡಿಯೋ ತುಣುಕನ್ನು ಕುಟುಂಬಸ್ಥರಿಗೆ ಫಾರ್ವರ್ಡ್ ಮಾಡಿ ವೈಯಕ್ತಿಕ ಗೌರವಕ್ಕೆ ಧಕ್ಕೆ ತಂದಿದ್ದಾಳೆ. ನನಗೆ ಮಾನಹಾನಿ ಆಗಿದೆ. ಆಕೆಯಿಂದ ಪರಿಹಾರ ಕೊಡಿಸಿ ಎಂದು ಗಂಡ ಕೋರ್ಟ್​ ಮೆಟ್ಟಿಲೇರಿದ್ದ. ವಾದ-ವಿವಾದ ಆಲಿಸಿದ ಬಳಿಕ ಪತ್ನಿಯ ತಪ್ಪು ಸಾಬೀತಾದ ಹಿನ್ನೆಲೆಯಲ್ಲಿ ಗಂಡನಿಗೆ ಮಾನಹಾನಿ ಪರಿಹಾರ ಹಣ ಪಾವತಿಸುವಂತೆ ಆಕೆಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ದಂಪತಿಗೆ ಒಬ್ಬ ಮಗಳೂ ಇದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net