

ಗದಗ: ಯುವತಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.
ದೀಪಾ ಕಾಗನೂರುಮಠ(30)ಮೃತ ಯುವತಿ. ಈಕೆ ತೀವ್ರ ಹೊಟ್ಟೆನೋವು ಹಾಗೂ ತಂದೆಯ ನೆನಪಿನಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಪತಂಜಲಿ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ದೀಪಾ, ಇಂದು ಅಲ್ಲಿಯೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮುಂಡರಗಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)