ಅಮಲು ಪದಾರ್ಥ‌ ಕೊಟ್ಟು ಲೈಂಗಿಕವಾಗಿ ಬಳಸಿಕೊಂಡ, ಗರ್ಭದಲ್ಲೇ ಭ್ರೂಣವನ್ನೂ ಕೊಲ್ಲಿಸಿದ! ಮುಂದೇನಾಯ್ತು?

Sexual assault, love cheating
Published on

ಉಡುಪಿ: ಮದುವೆ ಆಗುವುದಾಗಿ ಯುವತಿಯನ್ನು ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಯುವಕನೊಬ್ಬ ಆಕೆಗೆ ಕೈ ಕೊಟ್ಟಿದ್ದಾನೆ. ಗರ್ಭಿಣಿಯಾದ ಯುವತಿಗೆ ಬಲವಂತವಾಗಿ ಗುಳಿಗೆಗಳನ್ನು ನುಂಗಿಸಿ ಗರ್ಭಪಾತ ಮಾಡಿಸಿದ್ದು, ಕೊಲೆ ಬೆದರಿಕೆಯನ್ನೂ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ತೊಟ್ಟಂ ಪ್ರದೇಶದ ಯುವತಿಗೆ ಚಂಡೆ ತರಬೇತಿ ವೇಳೆ ಪರಿಚಯವಾದ ಕರಂಬಳ್ಳಿಯ ಅಕ್ಷಯ್ ಆಕೆಯನ್ನು ತನ್ನ ಮನೆಗೆ ಕರೆದೊಯ್ದು ಅಮಲು ಪದಾರ್ಥ‌ ನೀಡಿ ಅತ್ಯಾಚಾರ ಎಸಗಿದ್ದ. ಎಚ್ಚರಗೊಂಡ ಯುವತಿಗೆ ಮದುವೆ ಆಗುವುದಾಗಿ ನಂಬಿಸಿದ್ದ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಗರ್ಭಪಾತದ ಗುಳಿಗೆಯನ್ನು ಕೊಟ್ಟು ಬಲವಂತವಾಗಿ ನುಂಗಿಸಿದ್ದ, ಬಳಿಕ ಉಲ್ಟಾ ಹೊಡೆದಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಯುವತಿ ಒತ್ತಾಯಿಸಿದಾಗ ಆಕೆಯ ಮನೆಗೆ ಬಂದು ಜೀವಬೆದರಿಕೆಯನ್ನೂ ಹಾಕಿದ್ದಾನೆ. ನೊಂದ ಯುವತಿಗೆ ನ್ಯಾಯ ಕೊಡಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಂಬೇಡ್ಕರ್ ಯುವಸೇನೆ ಆರೋಪಿಸಿದೆ.

ಅಕ್ಷಯ್ ವಿರುದ್ಧ ಉಡುಪಿ ಮಹಿಳಾ ಠಾಣೆಯಲ್ಲಿ ಮೇ 5ರಂದು ದೂರು ದಾಖಲಾದರೂ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಒಂದು ವಾರದೊಳಗೆ ಆರೋಪಿಯನ್ನು ಬಂಧಿಸಿ ಯುವತಿಗೆ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಅಂಬೇಡ್ಕರ್ ಯುವಸೇನೆಯ ಗೌರವ ಅಧ್ಯಕ್ಷ ಜಯನ್ ಮಲ್ಪೆ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net