ಲಾಕ್ ಡೌನ್ ಹೇಗಿರಬೇಕು ಅಂತ ನಿರ್ಧರಿಸಲು ಐವರ ಸಮಿತಿ ರಚನೆ: ಇಂದು ರಾತ್ರಿ ವೇಳೆಗೆ ಸ್ಪಷ್ಟ ಮಾರ್ಗಸೂಚಿ ಬಿಡುಗಡೆ

ashok bommayi sudhakar
Published on

ಬೆಂಗಳೂರು: ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ವೀಕೆಂಡ್​ ಕರ್ಫ್ಯೂನಂತೆ ನಾಳೆ ರಾತ್ರಿ 9ರಿಂದ 14 ದಿನ ಕರ್ನಾಟಕ ಲಾಕ್​ ಆಗಲಿದೆ. ನಾಳೆಯಿಂದ ಜಾರಿಯಲ್ಲಿರುವ ಜನತಾ ಕರ್ಫ್ಯೂಗೆ ಮಾರ್ಗಸೂಚಿ ಸಿದ್ಧ ಮಾಡಲು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಐವರ ಸಮಿತಿ ರಚಿಸಿದ್ದಾರೆ.

ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ‌, ಡಾ.ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನೊಳಗೊಂಡ ಸಮಿತಿಯು ಸಂಜೆ ವೇಳೆಗೆ ಅಧಿಕೃತ ಮಾರ್ಗಸೂಚಿ ಪ್ರಕಟಿಸಲಿದೆ. ಬಳಿಕ ಲಾಕ್​ಡೌನ್​ನ ಸ್ವರೂಪ ಹೇಗಿರಲಿದೆ ಎಂಬುದಕ್ಕೆ ಸ್ಪಷ್ಟತೆ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net