ವೀಕೆಂಡ್​ ಕರ್ಫ್ಯೂನಂತೆ 14 ದಿನ ಕರ್ನಾಟಕ ಲಾಕ್​: ಅಗತ್ಯ ವಸ್ತು ಖರೀದಿಗೆ ಟೈಂ ಫಿಕ್ಸ್​, ಬಸ್​ ಸಂಚಾರ ಬಂದ್​, ಎಲೆಕ್ಷನ್​ ಮುಂದೂಡಿಕೆ

lockdown bangalore
Published on

ಬೆಂಗಳೂರು: ಮಹಾಮಾರಿ ಕರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ನಾಳೆ(ಏ.27) ರಾತ್ರಿಯಿಂದ 14 ದಿನ ರಾಜ್ಯಾದ್ಯಂತ  ಟೈಟ್​ ರೂಲ್ಸ್​ ಜಾರಿ ಆಗಲಿದೆ.

ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರವೇ ಅಗತ್ಯ ವಸ್ತು ಖರೀದಿಸಲು ನಜರು ಮನೆಯಿಂದ ಹೊರಬೇಕು.10 ಗಂಟೆ ಬಳಿಕ ಎಲ್ಲವೂ ಬಂದ್​ ಆಗಲಿದೆ. ಸಾರಿಗೆ ವ್ಯವಸ್ಥೆ ಇರುವುದಿಲ್ಲ. ಆದರೆ, ಸರಕು ಸಾಗಣೆಗೆ ಅವಕಾಶ ಇರಲಿದೆ. ಕಟ್ಟಡ ಕಾಮಗಾರಿ ಎಂದಿನಂತೆ ಮುಂದುವರಿಯಲಿದೆ. ಟೈಟ್​ ರೂಲ್ಸ್​ ನಡುವೆಯೂ ಮದ್ಯಪ್ರಿಯರಿಗೆ ಗುಡ್​ ನ್ಯೂಸ್​ ಇದೆ. ಬಾರ್​ನಲ್ಲಿ ಮದ್ಯ, ಹೋಟೆಲ್​ನಲ್ಲಿ ಊಟ ಪಾರ್ಸೆಲ್​ ತೆಗೆದುಕೊಳ್ಳಲು ಯಾವುದೇ ಅಡ್ಡಿ ಇಲ್ಲ.

ಉತ್ಪಾದನಾ ವಲಯ, ಕಟ್ಟಡ ನಿರ್ಮಾಣ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಕಟ್ಟಡ ಕಾಮಗಾರಿ ನಡೆಯಲಿದೆ. ಅಗತ್ಯ ಸೇವೆ ಇಲಾಖೆ ಸೇರಿ ಬ್ಯಾಂಕಿಂಗ್ ಕಚೇರಿಗಳು ತೆರೆದಿರುತ್ತವೆ.

ಇನ್ನು ಕಸಾಪ ಚುನಾವಣೆ ಸೇರಿ ಎಲ್ಲ ಚುನಾವಣೆಗಳನ್ನು 6 ತಿಂಗಳ ಕಾಲ ಸರ್ಕಾರ ಮುಂದೂಡುವಂತೆ ಆಯೋಗಕ್ಕೆ ಸರ್ಕಾರ ಮನವಿ ಮಾಡಿದೆ. ಸದ್ಯದಲ್ಲೇ ಜಿಪಂ ಮತ್ತು ತಾಪಂ ಚುನಾವಣಾ ಪ್ರಕ್ರಿಯೆ ಆರಂಭ ಆಗಬೇಕಿತ್ತು.

ಇನ್ನು 14 ದಿನ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿಯುವುದಿಲ್ಲ. ಮೆಟ್ರೋ ಸಂಚಾರ ಇರುವುದಿಲ್ಲ. ಮುಂದಿನ ಎರಡು ವಾರದಲ್ಲಿ ಪರಿಸ್ಥಿತಿ ಹತೋಟಿಗೆ ಬಾರದಿದ್ದಲ್ಲಿ ಮತ್ತೊಂದು ವಾರ ಬಿಗಿ ಕ್ರಮ ಮುಂದುವರಿಯಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net