

ಕಲಬುರಗಿ: ಜನಸಾಗರದ ನಡುವೆ ಆನೆಯಿಂದ ಹಾರ ಸ್ವೀಕರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಖುಷಿಯಾಗಿದ್ದಾರೆ.
ಕಲಬುರಗಿಯಿಂದ ಆಳಂದ ಸಮಾರಂಭಕ್ಕೆ ತೆರಳುವ ದಾರಿಯಲ್ಲಿ ಬರುವ ಕಡಗಂಚಿ ಗ್ರಾಮದ ಬಳಿ ಸಿದ್ದರಾಮಯ್ಯ ಅವರಿಗೆ ಗಜ ಸ್ವಾಗತ ನೀಡುವ ಮೂಲಕ ಕಾಂಗ್ರೆಸ್ ಪಡೆ ಅದ್ದೂರಿ ಸ್ವಾಗತ ನೀಡಿತು.
ಮುಖಂಡರಾದ ಶರಣು ಭೂಸನೂರ್ ಹಾಗೂ ಕೆಪಿಸಿಸಿ ಸದಸ್ಯ ಹಣಮಂತರಾವ ಭೂಸನೂರ್ ನೇತ್ರತ್ವದ ತಂಡವು ಆನೆ ಮೂಲಕ ಸ್ವಾಗತ ಮಾಡಿತು. ಕಡಗಂಚಿ ಮಠದ ಆನೆ ಲಕ್ಷ್ಮೀಯನ್ನು ವೇದಿಕೆಗೆ ಕರೆತಂದು ಆನೆ ಮೂಲಕ ಸಿದ್ದರಾಮಯ್ಯ ಅವರಿಗೆ ಬೃಹತ್ ಗಾತ್ರದ ಪುಷ್ಪಹಾರ ಅರ್ಪಣೆ ಮಾಡಿಸಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯಸಚೇತಕ ಡಾ.ಅಜಯ್ ಸಿಂಗ್, ಮಾಜಿ ಶಾಸಕ ಬಿ.ಆರ್. ಪಾಟೀಲ್ ಸೇರಿ ಅನೇಕರು ಉಪಸ್ಥಿತರಿದ್ದರು.