ಡಿಕೆಶಿ ಕಲೆಕ್ಷನ್​ ಗಿರಾಕಿ, ಕುಡುಕನ ಹಾಗೆ ಮಾತಾಡ್ತಾರೆ... ಕೋಲಾಹಲ ಸೃಷ್ಟಿಸಿದೆ ಸಲೀಂ-ಉಗ್ರಪ್ಪ ಸಂಭಾಷಣೆ

dks
Published on

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಕಲೆಕ್ಷನ್​ ಗಿರಾಕಿ ಎಂದು ಕಾಂಗ್ರೆಸ್​ ನಾಯಕರೇ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತರೂ ಆದ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಮಾಜಿ ಸಂಸದ ಉಗ್ರಪ್ಪ ಅವರು ಡಿಕೆಶಿ ಕುರಿತು ಗುಸುಗುಸು ಮಾತನಾಡಿಕೊಂಡರು. ' ಡಿಕೆಶಿ ದೊಡ್ಡ ಸ್ಕ್ರ್ಯಾಮ್, ಕಲೆಕ್ಷನ್ ಗಿರಾಕಿ' ಎಂದು ಡಿಕೆಶಿ ಆಪ್ತ ಹೇಳಿದ್ರೆ, ಅತ್ತ ಉಗ್ರಪ್ಪ, 'ನಿಮಗೆ ಗೊತ್ತಿಲ್ಲ ನಾವೆಲ್ಲ ಪಟ್ಟು ಹಿಡಿದು ಅಧ್ಯಕ್ಷ ಸ್ಥಾನ ಕೊಡಿಸಿದ್ದು, ಆದರೆ ತಕ್ಕಡಿ ಮೇಲೆ ಹೇಳುತ್ತಿಲ್ಲ...' ಎಂದಿರುವ ಸಂಭಾಷಣೆ ವೈರಲ್​ ಆಗಿದೆ.

ಡಿಕೆಶಿ ಕುರಿತು ಸಲೀಂ-ಉಗ್ರಪ್ಪರ ಸಂಭಾಷಣೆ ವಿವರ ಇಲ್ಲಿದೆ

ಸಲೀಂ: ಡಿಕೆಶಿ ದೊಡ್ಡ ಸ್ಕ್ರ್ಯಾಮ್. ಕೆದುಕುತ್ತಾ ಹೋದ್ರೆ ಇವರದ್ದು ಹೊರಬಹುತ್ತೆ...

ಸಲೀಂ: ಅವರ ಹುಡುಗನ ಹತ್ರನೇ 50 ರಿಂದ 100 ಕೋಟಿ ರೂಪಾಯಿ ಇದೆ ಎಂದರೆ, ಡಿಕೆ ಹತ್ರ ಇನ್ನೆಷ್ಟು ಇರಬೇಕು? ಡಿಕೆ ಕಲೆಕ್ಷನ್ ಗಿರಾಕಿ

ಉಗ್ರಪ್ಪ: ನಿಮ್ಗೆ ಗೊತ್ತಿಲ್ಲ. ನಾವೆಲ್ಲ ಪಟ್ಟು ಹಿಡಿದು ಅವರಿಗೆ ಅಧ್ಯಕ್ಷ ಸ್ಥಾನ ಕೊಡಿಸಿದ್ದು. ಆದರೆ ತಕ್ಕಡಿ ಮೇಲೆ ಹೇಳುತ್ತಿಲ್ಲ...

ಸಲೀಂ: ಡಿಕೆಶಿ ಮಾತನಾಡುವಾಗ ತೊದಲಿಸ್ತಾರೆ... ಒಂಥರಾ ಕುಡುಕರ ತರ ಮಾತಾಡ್ತಾರೆ. ಅವರೇನು ಡ್ರಿಂಕ್ಸ್ ಮಾಡ್ತಾರಾ? ಮಾಡಲ್ಲ ತಾನೇ. ಡಿಕೆಶಿ ಮಾತನಾಡುವಾಗ ಬಾರಿ ಏಮೋಷನಲ್ ಆಗಿ ಹೋಗ್ತಾರೆ. ಆದ್ರೆ ಸಿದ್ದರಾಮಯ್ಯನವರ ಬಾಡಿ ಲಾಂಗ್ವೇಜ್ ಹೇಗಿದೆ ಸರ್? ಖಡಕ್ ಅಂದ್ರೆ ಖಡಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net