ನಿವೃತ್ತ ಯೋಧನಿಗೆ ಅದ್ದೂರಿ ಸ್ವಾಗತ

soldier
ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಮಧುಕುಮಾರ್‌ಗೆ ಆನಂದಪುರದಲ್ಲಿ ಅದ್ದೂರಿ ಸ್ವಾಗತ ಕೋರಿ ಸನ್ಮಾನಿಸಲಾಯಿತು.
Published on

ಆನಂದಪುರ: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದ ಸುಬೇದಾರ್ ಮಧುಕುಮಾರ್‌ಗೆ ಗುರುವಾರ ಇಲ್ಲಿನ ರೈಲು ನಿಲ್ದಾಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು.

ಮೂಲತಃ ಕಡಬಾ ತಾಲೂಕು ಇಂಚಲಪಾಡಿಯವರಾದ ಇವರು ಶಿವಮೊಗ್ಗದಲ್ಲಿ ಉನ್ನತ ಶಿಕ್ಷಣ ಮತ್ತು ಆನಂದಪುರದಲ್ಲಿ ವಿವಾಹವಾಗಿದ್ದಾರೆ. ಯಡೇಹಳ್ಳಿಯಲ್ಲಿ ಇವರ ಕುಟುಂಬ ವಾಸವಾಗಿದೆ. 1996ರಲ್ಲಿ ಭೂ ಸೇನೆಗೆ ಸೇರಿದ ಇವರು 28 ವರ್ಷಗಳ ಕಾಲ ಸೇವೆ ಸಲ್ಲಿಸಿ ಏ.30ರಂದು ನಿವೃತ್ತರಾಗಿದ್ದರು. ಅದ್ದೂರಿ ಸ್ವಾಗತವನ್ನು ಕಂಡು ಮಧುಕುಮಾರ್ ಆನಂದಭಾಷ್ಪ ಸುರಿಸಿದರು.
ಯೋಧರಿಗೆ ಸಾರ್ವಜನಿಕರು ನೀಡುವ ಗೌರವವನ್ನು ನೋಡಿದರೆ ಸೈನಿಕ ಸೇವೆ ಬಗ್ಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ಮುಂದಿನ ಜನ್ಮ ಏನಾದರೂ ಇದ್ದರೆ ಯೋಧನಾಗಿ ದೇಶ ಸೇವೆ ಸಲ್ಲಿಸುವ ಆಸೆ ಇದೆ ಎಂದರು. ಕೆಪಿಎಸ್‌ನ ಶಿಕ್ಷಕರು, ಕನ್ನಡ ಯುವಕ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net