ಕೆರೆ ದಡದಲ್ಲಿ ಮೊಬೈಲ್ ಇಟ್ಟು ವೈದ್ಯರಿಬ್ಬರು ಆತ್ಮಹತ್ಯೆ! ಬೆಚ್ಚಿಬಿದ್ದ ಸ್ಥಳೀಯರು

suicide
Published on

ಹೈದರಾಬಾದ್​: ಕೆರೆಗೆ ಹಾರಿ ಒಂದೇ ಕುಟುಂಬದ ವೈದ್ಯರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಶಮೀರ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ. ಕೆರೆ ಬಳಿಗೆ ಬೈಕ್​ನಲ್ಲಿ ಬಂದ ಇವರಿಬ್ಬರೂ ದಡದಲ್ಲಿ ಬೈಕ್​ ನಿಲ್ಲಿಸಿ, ಮೊಬೈಲ್​ ಮತ್ತು ಮಾಸ್ಕ್​ ಅನ್ನು ಇಟ್ಟು ನೀರಿಗೆ ಧುಮಿಕಿ ಪ್ರಾಣಬಿಟ್ಟಿದ್ದು, ಜೀವ ಉಳಿಸಬೇಕಾದ ವೈದ್ಯರ ದುರಂತ ಸಾವಿಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಡಾ.ನಂದನ್​ ಮತ್ತು ಡಾ.ಗೌತಮ್​ ಮೃತರು. ಅಲ್ವಾಲ್‌ ಎಕ್ಸೆಲ್​ ಆಸ್ಪತ್ರೆಯ ಹೋಮಿಯೋಪಥಿ ವೈದ್ಯರಾಗಿ ನಂದನ್ ಕೆಲಸ ಮಾಡುತ್ತಿದ್ದರು. ಗೌತಮ್​ ಆಯುರ್ವೇದಿಕ್​ ವೈದ್ಯ. ಸಹೋದರರಾದ ಇವರಿಬ್ಬರೂ ಅಲ್ವಾಲ್​ನ ಸೂರ್ಯ ನಗರದಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಸ್ಥಳೀಯ ಈಜುಗಾರರ ಸಹಾಯದಿಂದ ವೈದ್ಯರ ಮೃತದೇಹಗಳನ್ನು ನೀರಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ವೈದ್ಯರಿಬ್ಬರ ಸಾವಿಗೆ ಕಾರಣ ಏನೆಂದು ತಿಳಿದುಬಂದಿಲ್ಲ.

ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ, ಸೆಲ್ಫಿ ಫೋಟೋ ತೆಗೆದುಕೊಳ್ಳುವಾಗ ಜಾರಿಬಿದ್ದು ಸತ್ತಿದ್ದಾರೆಯೇ? ತನಿಖೆ ಬಳಿಕ ಗೊತ್ತಾಗಲಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೆ, ಸೆಲ್ಫಿ ತೆಗೆದುಕೊಳ್ಳುವಾಗ ಬೈಕ್​ ಬಳಿಯೇ ಬ್ಯಾಗ್​, ಮೊಬೈಲ್​ ಅನ್ನು ಏಕೆ ಇಟ್ಟರು? ಇದು ಆಕಸ್ಮಿಕ ಸಾವಲ್ಲ, ಆತ್ಮಹತ್ಯೆ ಎಂಬ ಶಂಕೆಯೂ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net