ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: ಇಬ್ಬರು ಮಕ್ಕಳು ಸೇರಿ ಐವರ ಸಾವು, ಹಲವರ ಸ್ಥಿತಿ ಗಂಭೀರ

Bihar illegal firecracker unit blast
Published on

ಬಿಹಾರ: ಪಟಾಕಿ ತಯಾರಿಕೆ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ ಐವರು ಮೃತಪಟ್ಟಿದ್ದಾರೆ. ನಾಲ್ಕಕ್ಕೂ ಹೆಚ್ಚು ಜನರ ಸ್ಥಿತಿ ಗಂಭೀರವಾಗಿದೆ.

ಈ ದುರಂತ ಬಿಹಾರದ ಸರನ್​ ಜಿಲ್ಲೆಯ ಖೋಡೈಬಾಗ್​ ಬಜಾರ್​ನಲ್ಲಿ ಭಾನುವಾರ ರಾತ್ರಿ ಸಂಭವಿಸಿದ್ದು, ಈ ಸ್ಥಳದಲ್ಲಿ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು. ಸ್ಫೋಟದ ತೀವ್ರತೆಗೆ ಮೂರಂತಸ್ತಿನ ಕಟ್ಟದ ಕುಸಿದಿದ್ದು, ವ್ಯಕ್ತಿಯೊಬ್ಬರ ದೇಹದ ಭಾಗ ಸುಮಾರು 50 ಮೀಟರ್ ದೂರದಲ್ಲಿ ತೂರಿ ಬಿದ್ದಿದೆ. ಇನ್ನೂ ನಾಲ್ವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಕಾಖಾಘನೆ ಮಾಲೀಕ ಶಬೀರ್​ ಹುಸೇನ್​(22), ಮುಲಾಜಿಮ್​(35), ಶಬಾನಾ ಖಾತೂನ್​(32), ಶಾಜಾದ್​(5) ಸೇರಿ ಐವರು ಮೃತಪಟ್ಟಿದ್ದಾರೆ. ಕಟ್ಟಡ ಕುಸಿದ ಬಳಿಕೂ ಆ ಜಾಗದಲ್ಲಿ ಕೆಲ ಕಾಲ ಸ್ಫೋಟ ಮುಂದಿವರಿದಿತ್ತು. ಕೆಲವರು ಪಾಟಕಿ ಅಲ್ಲ, ಬಾಂಬ್​ ಸ್ಫೋಟ ಎಂದೂ ಮಾತನಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ತನಿಖೆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net