ಕೊರಟಗೆರೆ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೇಸತ್ತ ಗೃಹಿಣಿಯೊಬ್ಬರು ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ನಡೆದಿದೆ.
ಸುಶ್ಮಿತಾ (26) ಮೃತೆ. 6 ವರ್ಷದ ಹಿಂದೆ ನಾಗೇಶ್ ಎಂಬುವರ ಜತೆ ಸುಶ್ಮಿತಾಳ ಮದುವೆ ಆಗಿತ್ತು. ದಂಪತಿಗೆ ಮಗು ಕೂ ಇದೆ. ನಾಗೇಶ್ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ. ಭಾನುವಾರ ಮಗುವನ್ನು ಕಲ್ಯಾಣಿ ಮೇಲೆ ಕೂರಿಸಿ, ಕಂದನ ಕಣ್ಣೆದುರೇ ಸಾಯಲು ಸುಶ್ಮಿತಾ ಕಲ್ಯಾಣಿಗೆ ಜಿಗಿದಿದ್ದಾಳೆ. ಮಗು ಅಳುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಸುಶ್ಮಿತಾ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ.
ಕೂಡಲೇ ಸ್ಥಳೀಯರು ಕಲ್ಯಾಣಿಯಿಂದ ಸುಶ್ಮಿತಾಳನ್ನು ಮೇಲೆತ್ತಿ ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರಾದರೂ ಬದುಕಲಿಲ್ಲ. ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ ನಾಗೇಶ್ ಶನಿವಾರ ರಾತ್ರಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ. ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮ್ಮನಿಗೆ ಏನಾಗಿದೆ ಎಂದರಿಯದ ಪುಟ್ಟ ಮಗುವಿನ ಮುಖ ನೋಡಿದರೆ ಎಂಥವರ ಕರುಳು ಹಿಂಡುತ್ತೆ.
ಯುವಕನೆಂದು ಮಂಗಳಮುಖಿಯನ್ನು ಪ್ರೀತಿಸಿದ ಬಂಟ್ವಾಳ ಯುವತಿ! 4 ವರ್ಷದ ಬಳಿಕ ಸತ್ಯ ಹೊರಬಿದ್ದದ್ದೇ ರೋಚಕ
ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಅಡ್ಡ ಬಂದ ನಾಯಿ: ಬೈಕ್ ಸವಾರರಿಬ್ಬರ ಸಾವು
ಬೆಂಗಳೂರಲ್ಲಿ ಬೈಕ್ ಮೇಲೆ ಮರದ ದಿಮ್ಮಿ ಬಿದ್ದು ನವವಿವಾಹಿತ ಸಾವು! ಗರ್ಭಿಣಿ ಪತ್ನಿಯ ಗೋಳಾಟ ನೋಡಲಾಗ್ತಿಲ್ಲ