ಒಂದು ಟ್ರಿಲಿಯನ್ ಡಾಲರ್, ಕ್ರಿಯಾ ಯೋಜನೆಗೆ ಡಿಸೆಂಬರ್ ಗಡುವು; ಸಿಎಂ ಬೊಮ್ಮಾಯಿ‌ ಸೂಚನೆ

CM Bommai
Published on

ಬೆಂಗಳೂರು: ದೇಶದ‌ ಐದು ಟ್ರಿಲಿಯನ್ ಆರ್ಥಿಕತೆ ಗುರಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಗೆ ರಾಜ್ಯವು ಹೊಂದಿಕೊಂಡು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ಬೇಕಾದ ಕ್ರಿಯಾ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಸಿದ್ಧಪಡಿಸಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸೂಚಿಸಿದರು.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿನೀತಿ ಆಯೋಗ ಹಾಗೂ ಯೋಜನಾ ಇಲಾಖೆ ಹೊರತಂದಿರುವ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರಿತ ಪುಸ್ತಕವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಜನರ ಜೀವನಮಟ್ಟ ಸುಧಾರಣೆಯೊಂದಿಗೆ ಆರ್ಥಿಕ ಬೆಳವಣಿಗೆ ಸಾಧಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಉನ್ನತಮಟ್ಟದ ಗ್ರೂಪ್
ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಗ್ರೂಪ್ ರಚಿಸಬೇಕು. ಈ ಗುಂಪು ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ, ಟಿ.ವಿ.ಮೋಹನ್ ದಾಸ್ ಪೈ,‌ ಎಫ್ ಐಸಿಸಿಐ ಹಾಗೂ ಮೆಕೆನ್ಸಿ ಪ್ರತಿನಿಧಿಗಳನ್ನು ಒಳಗೊಂಡಿರಬೇಕು ಎಂದು ಸಿಎಂ ಬೊಮ್ಮಾಯಿ‌ ಸಲಹೆ ನೀಡಿದರು.

ಕ್ರಿಯಾ ಯೋಜನೆ ಸಿದ್ಧಪಡಿಸುವುದು, ಮೇಲ್ವಿಚಾರಣೆ, ಮೌಲ್ಯಮಾಪನ ಹಾಗೂ ರಾಜ್ಯದ ಪ್ರಗತಿ ನಿಯಮಿತವಾಗಿ ಪರಿಶೀಲನೆ ಈ ತಂಡದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಥ್ರಿ ಒನ್ ಫೋರ್ ಕ್ಯಾಪಿಟಲ್ ಸಂಸ್ಥೆಯ ಟಿ.ವಿ.ಮೋಹನ್ ದಾಸ್ ಪೈ ಹಾಗೂ ನಿಶಾ ಹೊಳ್ಳ ಜಂಟಿಯಾಗಿ ರಾಜ್ಯದ ಒನ್ ಟ್ರಿಲಿಯನ್ ಡಾಲರ್ ಜಿಡಿಪಿ ವಿಜನ್ ವರದಿ ಸಿದ್ಧಪಡಿಸಿದ್ದು, ತಂತ್ರಜ್ಞಾನ, ಬ್ರ್ಯಾಂಡಿಂಗ್, ಮಾರುಕಟ್ಟೆ ಮೂಲಕ ಕೃಷಿ ವಲಯಕ್ಕೆ ಉತ್ತೇಜನ, 200 ಸಣ್ಣ ಪಟ್ಟಣಗಳ ನಗರೀಕರಣ, ಬೆಂಗಳೂರು ಜಾಗತಿಕ ಹೈಟೆಕ್ ಸಿಟಿಯಾಗಲು ಹೆಚ್ಚಿನ ಹೂಡಿಕೆ ಸೇರಿ ಒಂಬತ್ತು ಅಂಶಗಳ ಕಾರ್ಯತಂತ್ರವನ್ನು ಶಿಫಾರಸ್ಸು ಮಾಡಿದೆ.

ನೀತಿ ಆಯೋಗ ಹಾಗೂ ಯೋಜನಾ ಇಲಾಖೆ ಹೊರತಂದಿರುವ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರಿತ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮುಖ್ಯ ಕಾರ್ಯ ದರ್ಶಿ ವಂದಿತಾ ಶರ್ಮಾ, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್ ಪ್ರಸಾದ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಉದ್ಯಮಿ ಮೋಹನ್ ದಾಸ್ ಪೈ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net