ಶಾಲೆಯ ಮಕ್ಕಳಿಗೆ ಕಾಗದ ಬರೆದ ಶಿಕ್ಷಕಿ! ಪತ್ರ ಕೈ ಸೇರುತ್ತಿದ್ದಂತೆ ಮಕ್ಕಳು-ಪಾಲಕರು ಫುಲ್​ ಖುಷ್​!

teacher geetha
Published on

ಚಿಕ್ಕಮಗಳೂರು: ಕರೊನಾ ಹಿನ್ನೆಲೆ ಮಕ್ಕಳು ಶಾಲೆಗೆ ಬಾರದೆ ಒಂದು ವರ್ಷ ಕಳೆದಿದೆ. ಹಾಗಾಗಿ ಇಲ್ಲೊಬ್ಬ ಶಿಕ್ಷಕಿ ತನ್ನ ಶಾಲೆಯ ಎಲ್ಲ ಮಕ್ಕಳಿಗೂ ಕಾಗದ ಬರೆದು ಯೋಗಕ್ಷೇಮ ವಿಚಾರಿಸಿದ್ದಾರೆ. ಟೀಚರ್​ ಕಳುಹಿಸಿದ ಪತ್ರ ಕೈಸೇರುತ್ತಿದ್ದಂತೆ ಮಕ್ಕಳ ಮೊಗದಲ್ಲಿ ಅಚ್ಚರಿ ಜತೆಗೆ ಖುಷಿ ಮೂಡಿದೆ.

ಚಿಕ್ಕಮಗಳೂರಿನ ಅಲ್ದೂರು ಸಮೀಪದ ಯಲಗುಡಿಗೆ ಗ್ರಾಮದ ಪ್ರಾಥಮಿಕ ಶಾಲೆ ಶಿಕ್ಷಕಿ ಗೀತಾ ಅವರು ಮಕ್ಕಳ ವಿಳಾಸಕ್ಕೆ ಪತ್ರ ಬರೆದು ಯೋಗ ಕ್ಷೇಮ ವಿಚಾರಿಸಿದ್ದಾರೆ. ಪ್ರತಿಯೊಬ್ಬರ ಮನೆಯಲ್ಲಿ ಮೊಬೈಲ್​ ಇದ್ದರೂ ಪತ್ರ ಪರೆದು ಶಿಕ್ಷಕಿ ಪೋಸ್ಟ್​ ಮಾಡಿದ್ದರು. ಮಕ್ಕಳ ಹೆಸರಲ್ಲಿ ಮನೆಗೆ ಪತ್ರ ತಲುಪುತ್ತಿದ್ದಂತೆ, ಕುತೂಹಲದಿಂದಲೇ ಮನೆಯವರು ತೆರೆದು ನೋಡಿದ್ದು, ಮಕ್ಕಳಿಗಾಗಿ ಶಿಕ್ಷಕಿ ಕಾಗದ ಬರೆದಿದ್ದಾರೆ ಎಂದು ಪಾಲಕರೂ ಸಂತಸಗೊಂಡಿದ್ದಾರೆ. ಮಕ್ಕಳು ಆ ಪ್ತರವನ್ನ ಓದುತ್ತಾ, ಸ್ನೇಹಿತರಿಗೂ ತೋರಿಸಿಕೊಂಡು ಪರಸ್ಪರ ಖುಷಿಪಟ್ಟಿದ್ದಾರೆ.

ಈ ಕುರಿತು ಮಾತಾನಡಿದ ಶಿಕ್ಷಕಿ ಗೀತಾ, ಪತ್ರ ತಲುಪುತ್ತಿದ್ದಂತೆ ಮಕ್ಕಳು, ಅವರ ಪಾಲಕರು ನನಗೆ ಫೋನ್​ ಮಾಡಿ ಖುಷಿ ಹಂಚಿಕೊಳ್ಳುತ್ತಿದ್ದಾರೆ. ನಮ್ಮ ಕಾಲದಲ್ಲಿ ಪತ್ರ ಎಂಬುದು ಸಂವಹನದ ಪ್ರಮುಖ ಸಾಧನ ಆಗಿತ್ತು. ಇಂದಿನ ಕಾಲದಲ್ಲಿ ಬಹುತೇಕ ಮಕ್ಕಳಿಗೆ ಪತ್ರ ಬರೆದು ಹೇಗೆ ಪೋಸ್ಟ್​ ಮಾಡಬೇಕು ಎಂಬುದೇ ಗೊತ್ತಿಲ್ಲ. ಹಾಗಾಗಿ ನಾನು ಪತ್ರವನ್ನೇ ಬಳಸಿದೆ. ಇದಕ್ಕೆ ಶಿಕ್ಷಣ ಸಚಿವರ ಮಾತುಗಳೇ ಪ್ರೇರಣೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net