ಆಕಾಶದಲ್ಲಿ ಕಾಣಿಸಿಕೊಂಡ ಅಚ್ಚರಿ; ಉಡುಪಿಗೆ ಏಲಿಯನ್​ಗಳು ಬಂತೆಂದು ಮಾತಾಡಿಕೊಂಡ ಜನರು!

Stalite
ಸಾಂದರ್ಭಿಕ ಚಿತ್ರ
Published on

ಉಡುಪಿ: ಆಕಾಶದಲ್ಲಿ ಚಲಿಸುವ ನಕ್ಷತ್ರಗಳನ್ನು ಕಂಡು, ಜನರೆಲ್ಲಾ ಕುತೂಹಲದಿಂದ ನೋಡಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ನಿನ್ನೆ ರಾತ್ರಿ (ಅ.28) ಆಕಾಶದಲ್ಲಿ ಒಂದೇ ಸಾಲಿನಲ್ಲಿ ನಕ್ಷತ್ರಗಳನ್ನು ಕಂಡು ಬೆಚ್ಚಿ ಬಿದ್ದ ಜನರು, ಏಲಿಯನ್​ಗಳು ಭೂಮಿಗೆ ಬಂದಿವೆ ಎಂದು ಮಾತಾಡಿಕೊಂಡಿದ್ದಾರೆ.

ಉಡುಪಿ ಭಾಗದಲ್ಲಿ ಕಾಣಿಸಿಕೊಂಡಿರುವ ನಕ್ಷತ್ರಗಳ ಸಾಲು.

ವಾಸ್ತವದಲ್ಲಿ ಇದು ಆಕಾಶಕ್ಕೆ ಹರಿಬಿಟ್ಟ ಸ್ಯಾಟ್​ಲೈಟ್​ಗಳು. ಹೆಚ್ಚಿನ ಇಂಟರ್ನೆಂಟ್ ವ್ಯವಸ್ಥೆಗಾಗಿ ಆಕಾಶಕ್ಕೆ ಅಮೇರಿಕಾದಿಂದ ಕೃತಕ ಉಪಗ್ರಹಗಳನ್ನು ಬಿಡಲಾಗಿದೆ. ಇವು ಒಂದೇ ಸಾಲಿನಲ್ಲಿ ಸಂಚರಿಸಿವೆ. ಇದು ಜನರ ಕುತೂಹಲಕ್ಕೆ ಕಾರಣವಾಗಿದೆ.

ಕಳೆದ ವರ್ಷವೂ ಉಡುಪಿ ಸೇರಿದಂತೆ ವಿವಿಧ ಭಾಗಗಳಲ್ಲಿ ಇದೇ ಮಾದರಿಯಲ್ಲಿ ಸ್ಯಾಟ್​​ಲೈಟ್​ಗಳು ಗೋಚರಿಸಿತ್ತು. ಆಕಾಶ ಸ್ವಚ್ಛವಾಗಿದ್ದರೆ ಇನ್ನಷ್ಟು ಸ್ಯಾಟ್​​ಲೈಟ್​​ಗಳು ಕಾಣಿಸುವ ಸಾಧ್ಯತೆ ಇದೆ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net