ರಾಷ್ಟ್ರೋತ್ಸಾಹದ ಸ್ಫುರಣ

Ayodhya
Published on
Sadguru
ಸದ್ಗುರು
ರಾಮನ ಸಂಪೂರ್ಣ ಜೀವನ- ಅವನ ರಾಜ್ಯ ಮತ್ತು ಹೆಂಡತಿಯನ್ನು ಕಳೆದುಕೊಳ್ಳುವುದರಿಂದ ಹಿಡಿದು, ತದನಂತರ ಎದುರಾದ ಕಷ್ಟಗಳು, ಮತ್ತೆ ತನ್ನ ಹೆಂಡತಿಯನ್ನು ಬಿಟ್ಟುಕೊಡುವುದು ಮತ್ತು ಅವನ ಸ್ವಂತ ಮಕ್ಕಳನ್ನೇ ಬಹುತೇಕ ಕೊಲ್ಲಲು ಹೊರಟಿದ್ದ ಈ ಘಟನೆಗಳನ್ನು ನೋಡಿದರೆ, ಅವು ಒಂದು ಸರಣಿ ದುರಂತವಾಗಿ ಕಾಣುತ್ತವೆ. ಇಷ್ಟೆಲ್ಲದರ ನಡುವೆಯೂ ಸಮಚಿತ್ತದಿಂದ ಉಳಿಯುವ ಅವನ ಸಾಮರ್ಥ್ಯ ಇಂದಿಗೂ ಅವನನ್ನು ಅಸಾಧಾರಣವಾಗಿಸಿದೆ. ಜನರು ರಾಮನನ್ನು ಆರಾಧಿಸುವುದು ಅವನ ಜೀವನದಲ್ಲಿನ ಯಶಸ್ಸನ್ನು ನೋಡಿ ಅಲ್ಲ, ಅವನು ಅತ್ಯಂತ ಕಷ್ಟಕರವಾದ ಕ್ಷಣಗಳನ್ನು ಸೊಗಸಾಗಿ ನಿಭಾಯಿಸಿದ ಕಾರಣಕ್ಕಾಗಿ. ಭಾರತೀಯರು 500 ವರ್ಷಗಳಿಂದ ರಾಮಮಂದಿರಕ್ಕಾಗಿ ತಾಳ್ಮೆಯಿಂದ ಕಾಯುತ್ತಿದ್ದಾರೆ, ಆದ್ದರಿಂದ ದೇಶದಲ್ಲಿ ದೊಡ್ಡ ಉತ್ಸಾಹವೇ ಮನೆಮಾಡಿದೆ. ಇದು ಅಭೂತಪೂರ್ವ. ಈ ಇಡೀ ಅಭಿಯಾನವನ್ನು ದೇಶದ ಸಾಮಾನ್ಯ ಜನರು ನಿರ್ವಹಿಸಿದ್ದಾರೆ. ಅವರ ಪುಟಿದೇಳುವ ಉತ್ಸಾಹ, ಉಲ್ಲಾಸ ಮತ್ತು ತಾಳ್ಮೆ ಪ್ರಶಂಸಾರ್ಹ.

ರಾಮನಿಗಾಗಿ 11 ದಿನಗಳ ಅನುಷ್ಠಾನ (ಪ್ರಾಯಶ್ಚಿತ್ತ ಮತ್ತು ಶುದ್ಧೀಕರಣಗಳನ್ನೊಳಗೊಂಡ ಪ್ರಕ್ರಿಯೆಗಳು) ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರ ತುಂಬ ಸಂತೋಷಕರ. ನ್ಯಾಯ ಮತ್ತು ಸ್ಥಿರತೆಯುಳ್ಳ ನಾಯಕನ ಪ್ರತಿರೂಪವೆಂದು ಪರಿಗಣಿಸಲ್ಪಡುವ ರಾಮನಿಗಾಗಿ ಪ್ರಧಾನಿ ಅನುಷ್ಠಾನ ಮಾಡುತ್ತಿದ್ದಾರೆ. ಅದೇ ರೀತಿ, ಭಾರತದ ಎಲ್ಲ ನಾಯಕರು ಮತ್ತು ನಾಗರಿಕರು ನ್ಯಾಯಯುತ, ಸ್ಥಿರ ಮತ್ತು ಸಮೃದ್ಧ ಭಾರತವನ್ನು ರಚಿಸಲು ಅನುಷ್ಠಾನದಲ್ಲಿ ತೊಡಗಿಕೊಳ್ಳಬೇಕು. ಇದುವೇ ರಾಮರಾಜ್ಯಕ್ಕೆ ನಾಂದಿಯಾಗಲಿದೆ.

ರಾಮನು ಅತ್ಯುತ್ತಮ ರಾಜನೆಂದು ಪರಿಗಣಿಸಲ್ಪಟ್ಟ ಕಾರಣದಿಂದ ಅವನು ದೇವರ ಸ್ಥಾನಕ್ಕೆ ಏರಿದ. ರಾಮನ ಆಡಳಿತವು ಅತ್ಯಂತ ಕರುಣೆಯಿಂದ ತುಂಬಿದ ನ್ಯಾಯಯುತವಾದ ಆಡಳಿತವಾಗಿತ್ತು. ಮತ್ತು ಅನೇಕ ವಿಧಗಳಲ್ಲಿ, ಈ 6,000 ವರ್ಷಗಳಲ್ಲಿ ಈ ನಾಗರಿಕತೆಯನ್ನು ನಿರ್ವಿುಸುವಲ್ಲಿ ರಾಮನ ಕಾಲ ಒಂದು ರೀತಿಯ ಆಧಾರಸ್ತಂಭವಾಗಿದೆ. ಅತ್ಯುತ್ತಮ ಆಡಳಿತ ಮತ್ತು ಸಂಪೂರ್ಣ ನ್ಯಾಯಯುತ ರಾಷ್ಟ್ರ ಎಂದರೆ ಅದು ರಾಮರಾಜ್ಯ. ಇಂದಿಗೂ ನಾವು ರಾಮರಾಜ್ಯ ಎಂದು ಮಾತನಾಡಿದಾಗ, ಅದು ಅತ್ಯಂತ ನ್ಯಾಯಯುತವಾದ ರಾಜ್ಯ ಎಂದರ್ಥ. ಶೋಷಣೆಯ ರಾಜ್ಯವಲ್ಲ, ದಬ್ಬಾಳಿಕೆಯ ರಾಜ್ಯವಲ್ಲ, ಮತ್ತು ನಾವು ಭಾರತವನ್ನು ನಿರ್ವಿುಸಬೇಕಿರುವುದು ಹೀಗೆಯೇ, ಅದಕ್ಕಾಗಿ ರಾಮ ತುಂಬ ಮುಖ್ಯವಾಗುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net