ಮಳಖೇಡದಲ್ಲಿ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ: ಐವರು ಪೂಜ್ಯರ ಸಾನ್ನಿಧ್ಯದಲ್ಲಿ ಜ್ಞಾನ ಸುಧೆ

malakheda
Published on

ಕಲಬುರಗಿ(ಮಳಖೇಡ): ಶ್ರೀ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ನಡೆಯುತ್ತಿರುವ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವದ ಎರಡನೇ ದಿನವಾದ ಶುಕ್ರವಾರ ಐವರು ಪೂಜ್ಯರು ಸಮಾಗಮಗೊಂಡಿದ್ದು, ವಿದ್ಯಾರ್ಥಿಗಳಿಂದ ಸುಧಾನುವಾದ ಆಲಿಸಿದ ನಂತರ ಜ್ಞಾನ ಸುಧೆಯನ್ನು ಹರಿಸಿದರು.

ಬೆಳಗ್ಗೆ ಬ್ರಾಹ್ಮಿ ಮಹೂರ್ತದಲ್ಲಿ ಕಾಗಿಣಾ ನದಿಯಲ್ಲಿ ಅವಗಾಹನ ಸ್ನಾನ ಮುಗಿಸಿದ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥರು ಜಯತೀರ್ಥರ ಮೂಲ ವೃಂದಾವನಕ್ಕೆ ನಿರ್ಮಾಲ್ಯ ಅಭಿಷೇಕ ಪೂರೈಸಿದರು. ಬೆಳಗ್ಗೆ 7 ಗಂಟೆಗೆ ಮೂಲ ಪಟ್ಟದ್ದೇವರ ಪೂಜೆ, ‌ಸೀತಾ ಸಮೇತ ರಾಮ ದೇವರ ಪೂಜೆಯನ್ನು ಬಂಗಾರದ ಮತ್ತು ವಜ್ರ ಮಂಟಪದಲ್ಲಿ ನೆರವೇರಿಸಿದರು.

ಶ್ರೀ ಜಯತೀರ್ಥರ ವೇದಿಕೆಯಲ್ಲಿ ಸುಬ್ರಹ್ಮಣ್ಯದ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥರು, ಪಲಿಮಾರು ಮಠದ ಪೀಠಾಧಿಪತಿ ಶ್ರೀ ವಿದ್ಯಾಧೀಶ ತೀರ್ಥರು, ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥರು, ಕೂಡ್ಲಿಯ ಶ್ರೀ ಆರ್ಯ ಅಕ್ಷೋಭ್ಯ ತೀರ್ಥರ ಮಠಾಧಿಪತಿ ಶ್ರೀ ರಘುವಿಜಯ ತೀರ್ಥರು ಸಾನ್ನಿಧ್ಯ ವಹಿಸಿ, ವಿದ್ಯಾರ್ಥಿಗಳ ಸುಧಾನುವಾದ ಆಲಿಸಿ, ನಂತರ ಅನುಗ್ರಹ ಸಂದೇಶ ನೀಡಿದರು.

ವಿವಿಧೆಡೆಯಿಂದ ಬಂದ ಭಕ್ತರು ಕಾಗಿಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿದರು. ಪೂಜ್ಯ ಶ್ರೀ ಸತ್ಯಾತ್ಮತೀರ್ಥರು ಭಕ್ತರಿಗೆ ತಪ್ತ ಮುದ್ರಾಧಾರಣೆ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net