More

    ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ… ಮಾಜಿ ಶಾಸಕರಿಗೆ ಪತ್ರ ಬರೆದು ಕ್ಷಮೆ ಕೋರಿದ ಡಿಕೆಶಿ

    ಬೆಂಗಳೂರು: ತಮ್ಮನ್ನು ತಳ್ಳಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲ, ನನ್ನ ಅರಿವಿನಲ್ಲೂ ಇಲ್ಲ. ಜನರ ಗುಂಪಿನಲ್ಲಿ ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ದರೆ ವಿಷಾದಿಸುವೆ… ಎಂದು ಮಾಜಿ ಶಾಸಕ ಬಿ.ಆರ್​. ಪಾಟೀಲ್​ ಅವರಿಗೆ ಪತ್ರ ಬರೆದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಕ್ಷಮೆ ಕೋರಿದ್ದಾರೆ.

    ಮೇಕೆದಾಟು ಪಾದಯಾತ್ರೆಯ ವೇಳೆ ಬಿ.ಆರ್​. ಪಾಟೀಲ್​ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆ ಕೋರಿದ್ದಾರೆ. ಪಾದಯಾತ್ರೆ ಅರಮನೆ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಪಾಟೀಲ್​ ಅವರನ್ನು ಅನುಚಿತವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿ ಬಂದಿತ್ತು. ಪಾಟೀಲ್​ ಈ ಬಗ್ಗೆ ಪಕ್ಷದ ಹೈಕಮಾಂಡ್​ಗೂ ದೂರು ನೀಡಿದ್ದರು. ಹಿರಿಯ ಮುಖಂಡರಿಗೆ ಅಪಮಾನ ಮಾಡಿದ ಬಗ್ಗೆ ಹೈಕಮಾಂಡ್​ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ ಡಿಕೆಶಿ ಗುರುವಾರ ಪತ್ರ ಬರೆದಿದ್ದಾರೆ. ಗೋವಾದಿಂದ ವಾಪಸಾದ ಬಳಿಕ ಖುದ್ದು ಭೇಟಿ ಮಾಡುವುದಾಗಿಯೂ ಪತ್ರದಲ್ಲಿ ಡಿಕೆಶಿ ತಿಳಿಸಿದ್ದಾರೆ.

    ತುಮಕೂರು ಮಾಜಿ ಕಾರ್ಪೋರೇಟರ್​ನ ಕಾಮದಾಹಕ್ಕೆ ಯುವತಿ ಬಲಿ! ಬೆಚ್ಚಿಬೀಳಿಸುತ್ತೆ ಕೊನೇ ಕ್ಷಣದಲ್ಲಿ ಆಕೆ ಬಾಯ್ಬಿಟ್ಟ ರಹಸ್ಯ

    ಹಿಂದೂ ಯುವತಿ ಬಾಳಲ್ಲಿ ಘೋರ ದುರಂತ: ಗಂಡನ ರಹಸ್ಯ ಬಯಲಾದ ಬೆನ್ನಲ್ಲೇ ಮತ್ತೊಂದು ನರಕ ದರ್ಶನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts