

ಗೋಪಾಲಕೃಷ್ಣ ಪಾದೂರು, ಉಡುಪಿ
ರಾಜ್ಯದ ಸಹಕಾರಿಗಳ ಬಹುಬೇಡಿಕೆಯ ಯಶಸ್ವಿನಿ ಯೋಜನೆ ಮರು ಜಾರಿಯಾದ ಎರಡೇ ವರ್ಷಕ್ಕೆ ಮಂಕಾಗಿದೆ. ಈ ಬಾರಿ ಸುಮಾರು ಐದೂವರೆ ಲಕ್ಷಕ್ಕೂ ಅಧಿಕ ಮಂದಿ ಯೋಜನೆಯಿಂದ ಹೊರಗುಳಿದಿದ್ದಾರೆ. ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಕನಿಷ್ಠ 50 ಲಕ್ಷ ಸದಸ್ಯರನ್ನು ನೋಂದಾಯಿಸುವ ಗುರಿ ನಿಗದಿಯಾಗಿತ್ತು. ಆದರೆ ಯೋಜನೆಗೆ ಸೇರ್ಪಡೆಯಾಗಿದ್ದು 41,57,317 ಸದಸ್ಯರು ಮಾತ್ರ. ಪ್ರಥಮ ವರ್ಷದಲ್ಲಿ (2022-23) 30 ಲಕ್ಷ ಸದಸ್ಯರ ಗುರಿ ನಿಗದಿಪಡಿಸಿದ್ದರೂ, 47 ಲಕ್ಷಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿದ್ದರು. ಸುಮಾರು 63,691 ಫಲಾನುಭವಿಗಳು ಯಶಸ್ವಿನಿ ನೆಟ್ವರ್ಕ್ ಆಸತ್ರೆಗಳಲ್ಲಿ ಚಿಕಿತ್ಸೆ ಪಡೆದು, 103 ಕೋಟಿ ರೂ. ವ್ಯಯಿಸಲಾಗಿದೆ.
ಜನವರಿಯಲ್ಲಿ ಹೊಸ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದರೂ, ಪ್ರಮುಖ ಆಸ್ಪತ್ರೆಗಳು ಯೋಜನೆ ವ್ಯಾಪ್ತಿಗೆ ಸೇರಲಿಲ್ಲ. ಇದರ ಪರಿಣಾಮ, ಹೊಸದಾಗಿ ನೋಂದಣಿಗೆ ಹೆಚ್ಚಿನವರು ಆಸಕ್ತಿ ತೋರಲಿಲ್ಲ. ಲೋಕಸಭಾ ಚುನಾವಣೆ, ಮಕ್ಕಳ ಪರೀಕ್ಷೆಯಲ್ಲಿ ಸದಸ್ಯರು ವ್ಯಸ್ತರಾಗಿರುವ ಸಮಯದಲ್ಲೇ ಮರು ನೋಂದಣಿಗೆ (ಮಾರ್ಚ್) ಕೇವಲ 30 ದಿನಗಳ ಕಾಲಾವಕಾಶ ನೀಡಿದ್ದರಿಂದ ಗುರಿ ಸಾಧನೆ ಸಾಧ್ಯವಾಗಿಲ್ಲ. ಅನೇಕ ಸದಸ್ಯರು ಸಹಕಾರಿ ಸಂಘಗಳನ್ನು ಸಂರ್ಪಸಿದಾಗ ಕಾರ್ಡ್ ನವೀಕರಣಕ್ಕೆ ಇಲಾಖೆಯಿಂದ ಅರ್ಜಿ ಬಂದಿಲ್ಲ ಎಂಬ ಉತ್ತರ ಲಭಿಸಿತ್ತು. ನಂತರ ಅವಧಿ ಮುಗಿವವರೆಗೂ ನವೀಕರಣದ ಮಾಹಿತಿ ನೀಡಿಲ್ಲ. ಹೀಗಾಗಿ ಯೋಜನೆಯಿಂದ ಅನೇಕರು ಹೊರಗೆ ಉಳಿಯುವಂತಾಗಿದೆ. ಅನೇಕ ಸಹಕಾರಿ ಸಂಘಗಳು ಈ ಬಗ್ಗೆ ನಿರಾಸಕ್ತಿ ವಹಿಸಿವೆ ಎಂಬುದು ರೈತರ ಅಸಮಾಧಾನ.
3 ಲಕ್ಷದಿಂದ 72 ಸಾವಿರಕ್ಕೆ ಇಳಿಕೆ: ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷ 3,22,000 ಮಂದಿ ಯಶಸ್ವಿನಿ ಯೋಜನೆಗೆ ನೋಂದಣಿ ಮಾಡಿದ್ದರು. ಆದರೆ ಈ ಬಾರಿ 72,228 ಮಂದಿ ಮಾತ್ರ ಸೇರಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ (3,26,362 ಸದಸ್ಯರು) ನೋಂದಣಿಯಾಗಿದ್ದು, 20,298 ಫಲಾನುಭವಿಗಳೊಂದಿಗೆ ಯಾದಗಿರಿ ಕೊನೆಯ ಸ್ಥಾನದಲ್ಲಿದೆ.
300 ಕೋಟಿ ರೂಪಾಯಿ ಅನುದಾನ: ಸಹಕಾರ ಇಲಾಖೆ 2003ರಲ್ಲಿ ಯಶಸ್ವಿನಿ ಯೋಜನೆಯನ್ನು ಆರಂಭಿಸಿ 2018ರವರೆಗೆ ಜಾರಿಯಲ್ಲಿತ್ತು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಈ ಯೋಜನೆ ವರ್ಗಾವಣೆಗೊಂಡು ಆರೋಗ್ಯ ಕರ್ನಾಟಕ ಯೋಜನೆ ಜತೆ ವಿಲೀನಗೊಂಡಿತು. ರಾಜ್ಯದ ಸಹಕಾರಿಗಳು ಮತ್ತು ರೈತರ ನಿರಂತರ ಒತ್ತಾಯ ಪರಿಗಣಿಸಿ ರಾಜ್ಯ ಸರ್ಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಪರಿಷ್ಕೃತ ಯಶಸ್ವಿನಿ ಯೋಜನೆ ಮರುಜಾರಿಗೆ ತೀಮಾನಿಸಿ 300 ಕೋಟಿ ರೂ. ಅನುದಾನ ನೀಡಿತ್ತು.
ಯಶಸ್ವಿನಿ ಅತ್ಯುತ್ತಮ ಯೋಜನೆ. ರೈತರು ಮತ್ತು ಸಹಕಾರಿ ಸಂಘಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ. ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ದರ ಪಟ್ಟಿ ಸುಪ್ರೀಂ ತೀರ್ಪಿನಲ್ಲೂ ಉಲ್ಲೇಖ ಸುಖಾಸುಮ್ಮನೆ ಅಮಾನತು ಆದೇಶ ಮುಂದುವರಿಸುವುದರಿಂದ ಸರ್ಕಾರಕ್ಕೆ ಅನಗತ್ಯ ಆರ್ಥಿಕ ಹೊರೆಯಾಗುತ್ತದೆ ಎಂದು ಸುಪ್ರೀಂಕೋರ್ಟ್ ಸಹ ಹೇಳಿದೆ. ಆಜಯ್ ಕುಮಾರ್ ಚೌಧರಿ ಪ್ರಕರಣದ ತೀರ್ಪಿನಲ್ಲಿ ಅಮಾನತ್ತು ಆದೇಶಗಳನ್ನು ಸಕ್ಷಮ ಪ್ರಾಧಿಕಾರಗಳು ಪ್ರತಿ 3 ತಿಂಗಳಿಗೊಮ್ಮೆ ಪರಮಾಶಿಸುವುದು ಕಡ್ಡಾಯ ಎಂದು ಹೇಳಿದೆ. ಅಲ್ಲದೆ ಕೆಎಸ್ಪಿ (ಡಿಪಿ) ನಿಯಮ 1965/89 ಮತ್ತು 2021 ತಿದ್ದುಪಡಿನಿಯಮ 5(6)ರಲ್ಲಿ ಮತ್ತು ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10ರಲ್ಲೂ ಅಮಾನತು ಪ್ರಕ್ರಿಯೆಯ ಬಗ್ಗೆ ಸ್ಪಷ್ಟವಾಗಿದೆ. ಇಲ್ಲಿಗೂ ಅನ್ವಯ. 15 ದಿನಕ್ಕೊಮ್ಮೆ ಸಭೆ ನಡೆಸಿ ಚಿಕಿತ್ಸಾ ವೆಚ್ಚವನ್ನು ನೆಟ್ವರ್ಕ್ ಆಸ್ಪತ್ರೆಗಳಿಗೆ ಪಾವತಿ ಮಾಡಲಾಗುತ್ತಿದೆ. ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಗಳು ಸಾಮಾಜಿಕ ಜವಾಬ್ದಾರಿ ವಹಿಸಿಕೊಳ್ಳಬೇಕು.
| ಡಾ.ಕೃಷ್ಣ ಪ್ರಸಾದ್ ಕೆ. ಸದಸ್ಯರು, ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್